Advertisement

ರಾಯಚೂರಲ್ಲಿ ಶೇ.51 ವ್ಯಾಕ್ಸಿನೇಶನ್‌ ಪ್ರಗತಿ ಸಾಧನೆ

08:01 PM Jun 22, 2021 | Team Udayavani |

ರಾಯಚೂರು: ಕೋವಿಡ್‌ ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ರಾಜ್ಯ ಸರ್ಕಾರದಿಂದ 18 ವರ್ಷದಿಂದ 44 ವರ್ಷದೊಳಗಿನ ಆದ್ಯತೆ ಗುಂಪಿನ ಜನರಿಗೆ ವ್ಯಾಕ್ಸಿನೇಶನ್‌ ನೀಡುತ್ತಿದ್ದು, ಈವರೆಗೆ ಶೇ.51 ರಷ್ಟು ಪ್ರಗತಿ ಸಾ ಧಿಸಲಾಗಿದೆ ಎಂದು ಡಿಸಿ ಆರ್‌. ವೆಂಕಟೇಶ್‌ ಕುಮಾರ್‌ ತಿಳಿಸಿದರು.

Advertisement

ನಗರದ ರಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್‌ ವ್ಯಾಕ್ಸಿನ್‌ ನೀಡುವ ಕುರಿತಂತೆ ಸರ್ಕಾರ ಹಲವು ನಿರ್ದೇಶನಗಳನ್ನು ನೀಡಿದೆ. ಅದರಂತೆ ಆದ್ಯತಾ ಗುಂಪುಗಳು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನಿಯಮಾನುಸಾರ ಜಿಲ್ಲಾದ್ಯಂತ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 4.32 ಲಕ್ಷ ಜನರು 45 ವರ್ಷ ಮೇಲ್ಪಟ್ಟವರಿದ್ದಾರೆ. ಅವರಲ್ಲಿ 2.21 ಲಕ್ಷ ಜನರಿಗೆ ಈಗಾಗಲೇ ಲಸಿಕೆ ನೀಡುವ ಮೂಲಕ ಶೇ.51ರಷ್ಟು ಪ್ರಗತಿ ಸಾಧಿ ಸಲಾಗಿದೆ ಎಂದರು.

18 ವರ್ಷದಿಂದ 44 ವರ್ಷದೊಳಗಿನ 9.49 ಲಕ್ಷ ಜನರಿದ್ದು, ಈಗಾಗಲೇ ವಿಕಲಚೇತರು, ಮಂಗಳಮುಖೀಯರು, ಎಪಿಎಂಸಿ ಹಮಾಲರು, ಆರೋಗ್ಯ ಇಲಾಖೆಯ ಸಿಬ್ಬಂದಿ ಕುಟುಂಬಸ್ಥರು, ಪೊಲೀಸ್‌ ಇಲಾಖೆ ಸಿಬ್ಬಂದಿ ಕುಟುಂಬಸ್ಥರು, ಜೆಸ್ಕಾಂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಕುಟುಂಬಸ್ಥರು ಸೇರಿದಂತೆ ಆದ್ಯತೆ ಗುಂಪಿನಲ್ಲಿ ಕಾರ್ಯನಿರ್ವಹಿಸುವ 67,280 ಜನರಿಗೆ ಲಸಿಕೆ ನೀಡಲಾಗಿದೆ ಎಂದರು.

ಪ್ರತಿ ಗ್ರಾಪಂ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಏಕಕಾಲಕ್ಕೆ ಅಭಿಯಾನ ಆರಂಭಗೊಂಡಿದ್ದು, 20ರಿಂದ 25 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 45,000 ವೈಲ್ಸ್‌ಗಳಷ್ಟು ಲಸಿಕೆ ದಾಸ್ತಾನಿದ್ದು, ಮುಂದಿನ ದಿನಗಳಲ್ಲಿ ನಿಯಮಾನುಸಾರ ನೀಡಲಾಗುವುದು ಎಂದರು.

ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ರಿಮ್ಸ್‌ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ| ಬಸವರಾಜ್‌ ಪಿರಾಪುರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಶಂಕರ್‌, ಆರ್‌ಸಿಎಚ್‌ ಅಧಿಕಾರಿ ಡಾ| ವಿಜಯ ಸೇರಿದಂತೆ ರಿಮ್ಸ್‌ ಹಾಗೂ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next