ಬೀದರ್: ಜಿಲ್ಲೆಯಲ್ಲಿ ಹೆಮ್ಮಾರಿ ಕೋವಿಡ್ ಸೋಂಕಿಗೆ ಗುರುವಾರ ಮತ್ತೆ ಮೂವರು ಮೃತಪಟ್ಟಿದ್ದಾರೆ
ಈ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ 51 ಮಂದಿಗೆ ಹೊಸದಾಗಿ ಈ ಸೋಂಕು ಕಾಣಿಸಿಕೊಂಡಿದೆ.
ಕಮಲನಗರ ಪಟ್ಟಣದ 60 ವರ್ಷದ ವ್ಯಕ್ತಿ, ಹುಲಸೂರು ಪಟ್ಟಣದ 50 ವರ್ಷದ ವ್ಯಕ್ತಿ ಹಾಗೂ ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ 70 ವರ್ಷದ ವೃದ್ಧೆ ವೈರಾಣುವಿಗೆ ಬಲಿಯಾಗಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಈ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮೃತಪಟ್ಟವರ ಸಂಖ್ಯೆ 133ಕ್ಕೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗಿರುವ 51 ಪಾಸಿಟಿವ್ ಪ್ರಕರಣಗಳಲ್ಲಿ ಬೀದರ ನಗರ ತಾಲೂಕಿನ 25, ಭಾಲ್ಕಿ ತಾಲೂಕಿನ 9, ಹುಮನಾಬಾದ- ಚಿಟಗುಪ್ಪ ತಾಲೂಕಿನ 7, ಔರಾದ- ಕಮಲನಗರ ತಾಲೂಕಿನ 5, ಬಸವಕಲ್ಯಾಣ – ಹುಲಸೂರು ತಾಲೂಕಿನ 4 ಹಾಗೂ ಅನ್ಯ ರಾಜ್ಯ ಮತ್ತು ಜಿಲ್ಲೆಯ ಒಂದು ಪ್ರಕರಣ ಸೇರಿದೆ.
ಜಿಲ್ಲೆಯಲ್ಲಿ ಗುರುವಾರದವರೆಗೆ ಸೋಂಕಿತರ ಸಂಖ್ಯೆ 4307ಕ್ಕೆ ವೃದ್ಧಿಸಿದೆ. ಇಂದು ಒಂದೇ ದಿನ 105 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಬಿಡುಗಡೆಯಾದವರ ಸಂಖ್ಯೆ 3592ಕ್ಕೆ ಏರಿಕೆ ಆಗಿದೆ. ಇನ್ನೂ 578 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಈವರೆಗೆ 66,610 ಜನರ ಗಂಟಲು ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 61,740 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 563 ಜನರ ವರದಿ ಬರಬೇಕಿದೆ.