Advertisement
ಹೌದು, ರವಿವಾರ ಕೇಂದ್ರ ಚುನಾವಣ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಮಾ.14ರಂದು ಚುನಾವಣ ಆಯೋಗ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಗೇಮಿಂಗ್ ಫ್ಯೂಚರ್ ಕಂಪೆನಿಯು 1,368 ಕೋಟಿ ರೂ. ಬಾಂಡ್‌ಗಳನ್ನು ಖರೀದಿಸಿದ ಮಾಹಿತಿ ಗೊತ್ತಾಗಿತ್ತು.
Related Articles
Advertisement
ಚುನಾವಣ ಬಾಂಡ್ ಮೂಲಕ ಕೆಲವು ಪಕ್ಷಗಳು ನೂರಾರು ಕೋಟಿ ರೂ. ದೇಣಿಗೆ ಪಡೆದರೆ, ಬಹಳಷ್ಟು ಪಕ್ಷಗಳಿಗೂ ಒಂದು ಪೈಸೆಯೂ ದೇಣಿಗೆ ಬಂದಿಲ್ಲ! 500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣ ಬಾಂಡ್ ಕುರಿತು ಮಾಹಿತಿಯನ್ನು ಒದಗಿಸಿವೆ. ರಾಷ್ಟ್ರೀಯ ಪಕ್ಷವಾಗಿರುವ ಎನ್‌ಪಿಪಿ, ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ), ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಸಿಪಿಐ-ಎಂಎಲ್ ಸೇರಿ ಬಹಳಷ್ಟು ಪಕ್ಷಗಳು ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂಬ ವಿಚಾರವೂ ಈಗ ಬೆಳಕಿಗೆ ಬಂದಿದೆ.
ಬಾಂಡ್ ಮೂಲಕ ಬಿಜೆಪಿ ಖಾತೆ ಸೇರಿದ ಕಪ್ಪುಹಣ: ಕೈ ಆರೋಪಚುನಾವಣ ಬಾಂಡ್ ಸ್ಕೀಮ್ ಮೂಲಕ ಕಪ್ಪು ಹಣವು ಬಿಜೆಪಿಯ ಖಾತೆಗೆ ಸೇರಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದೊಂದು ಕಿಕ್ ಬ್ಯಾಕ್ ಪ್ರಕರಣವಾಗಿದೆ ಎಂದೆದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ಅವರು ಬಿಜೆಪಿ ವಿರುದ್ಧ ಕಡು ಟೀಕೆ ಮಾಡಿದ್ದು, ಚುನಾವಣಾ ಬಾಂಡ್ ಹಗರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಜೈರಾಮ್ ರಮೇಶ್, 2018ರಲ್ಲಿ ರಚಿಸಲಾದ ಚುನಾವಣ ಬಾಂಡ್ ಅತೀದೊಡ್ಡ ಸುಲಿಗೆ ಹಗರಣವಾಗಿದೆ. ಪಿಎಂಎಲ್ ಉಲ್ಲಂ ಸಿದ 19 ಕಂಪೆನಿಗಳನ್ನು ವಿತ್ತ ಸಚಿವಾಲಯ ಗುರುತಿಸಿತ್ತು. ಆ ಕಂಪೆನಿಗಳಿಂದ ಬಿಜೆಪಿ 2,717 ಕೋಟಿ ರೂ. ಬಾಂಡ್ ಮೂಲಕ ಸಂಗ್ರಹಿಸಿದ ಎಂದು ಆರೋಪಿಸಿದರು.