Advertisement

ರಾಯಚೂರಲ್ಲಿ ಕೋವಿಡ್ ಸ್ಫೋಟ: ಇಂದು 503 ಪಾಸಿಟಿವ್ ಪ್ರಕರಣ

03:34 PM Apr 22, 2021 | Team Udayavani |

ರಾಯಚೂರು: ರಾಜ್ಯದೆಲ್ಲೆಡೆ ಶರವೇಗದಲ್ಲಿ ಹರಡುತ್ತಿರುವ ಕೋವಿಡ್ ವೈರಸ್ ಬಿಸಿಲೂರು ರಾಯಚೂರಲ್ಲೂ ಸ್ಫೋಟಗೊಂಡಿದೆ. ಗುರುವಾರವೊಂದೇ ದಿನ 503 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜನರನ್ನು ಆತಂಕಕ್ಕೆಡೆ ಮಾಡಿದೆ.

Advertisement

ಈ ಕಾರಣದಿಂದ ಜಿಲ್ಲಾಡಳಿತ ನೈಟ್ ಕರ್ಫ್ಯೂ ಮಾತ್ರವಲ್ಲದೇ ಮಧ್ಯಾಹ್ನದಿಂದಲೇ ಕರ್ಫ್ಯೂ ಜಾರಿ ಜಾರಿಗೊಳಿಸಿದೆ. ಪ್ರಮುಖ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳನ್ನು ಪೊಲೀಸರು ನಿಲ್ಲಿಸಿದರು.

ಜಿಲ್ಲೆಯಲ್ಲಿಂದು 2686 ಮಾದರಿ ಪರೀಕ್ಷೆ ಮಾಡಿಸಿದ್ದು, 2183 ವರದಿ ನೆಗೆಟಿವ್ ಬಂದಿವೆ. ರಾಯಚೂರು ತಾಲೂಕಿನಲ್ಲಿ 183, ಸಿಂಧನೂರು 109, ಮಾನ್ವಿ 78, ದೇವದುರ್ಗ 89, ಲಿಂಗಸೂಗೂರಲ್ಲಿ 44 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next