Advertisement
ವಾರದ ಬಳಿಕ ಸಾವಿನ ಸಂಖ್ಯೆ ಮೂರಂಕೆಗೇರಿದೆ. ಜತೆಗೆ 2,000ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.
Related Articles
Advertisement
ಜುಲೈ 17ಕ್ಕೆ 115 ಸಾವು ಸಂಭವಿಸಿತ್ತು. ಜುಲೈ 18ರಿಂದ 22ರವರೆಗೆ ಕ್ರಮವಾಗಿ 93, 91, 72, 61, 55ಕ್ಕೆ ಇಳಿಕೆಯಾಗುತ್ತಾ ಸಾಗಿತ್ತು. ಗುರುವಾರ ಮತ್ತೆ ಏರಿಕೆಯಾಗಿ 97 ಮಂದಿ ಸಾವಿಗೀಡಾಗಿದ್ದರು.
ಶುಕ್ರವಾರ 110 ಮಂದಿ ಮೃತಪಟ್ಟಿದ್ದು, ಇದು ದೇಶದಲ್ಲಿಯೇ ಎರಡನೇ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಬೆಂಗಳೂರು 50, ಮೈಸೂರು, ದಕ್ಷಿಣ ಕನ್ನಡ ತಲಾ 6, ಧಾರವಾಡ, ಕಲಬುರಗಿ ಹಾಗೂ ತುಮಕೂರು ತಲಾ 5 ಸಾವು ಸಂಭವಿಸಿದೆ.
ಸಾವಿನಲ್ಲಿ ಬೆಂಗಳೂರು ಪ್ರಥಮ, ಮೈಸೂರು (99) ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ಮೃತಪಟ್ಟವರ ಪೈಕಿ 8 ಮಂದಿಗೆ ಸೋಂಕಿನ ಲಕ್ಷಣ ವಿರಲಿಲ್ಲ ಹಾಗೂ 22 ಮಂದಿಗೆ ಬೇರೆ ಕಾಯಿಲೆಗಳಿರಲಿಲ್ಲ.
2ನೇ ದಿನವೂ 5000ಕ್ಕೂ ಹೆಚ್ಚು ಕೇಸ್ಗುರುವಾರ 5,030 ಮಂದಿಗೆ ಸೋಂಕು ಖಚಿತಪಟ್ಟಿತ್ತು. ಆರ್‌ಟಿಪಿಸಿಆರ್ 22,408 ಮತ್ತು ರ್ಯಾಪಿಡ್ ಆ್ಯಂಟಿಜನ್ 7,411 ಸೇರಿ ಒಟ್ಟು 29,819 ಪರೀಕ್ಷೆ ನಡೆದಿದ್ದು, ಶುಕ್ರವಾರ 5,007 ಮಂದಿಗೆ ಪಾಸಿಟಿವ್ ಬಂದಿದೆ. ಪಾಸಿಟಿವಿಟಿ ದರ ಶೇ.16ರಷ್ಟಿದ್ದು, ಪರೀಕ್ಷೆಗೊಳಪಟ್ಟ ನೂರು ಮಂದಿಯಲ್ಲಿ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 11 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕೇಸ್
ಬೆಂಗಳೂರು, ಮೈಸೂರಿನಲ್ಲಿ 200ಕ್ಕೂ ಹೆಚ್ಚು, ಉಡುಪಿ, ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ವಿಜಯಪುರ, ಬಳ್ಳಾರಿ, ಹಾಸನ, ಬೆಳಗಾವಿ, ಗದಗ ಹಾಗೂ ರಾಯಚೂರು ಸೇರಿ ಒಟ್ಟು 11 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಶೇ. 75ರಷ್ಟು ಸಕ್ರಿಯ
ಶುಕ್ರವಾರ ಪತ್ತೆಯಾದ ಪ್ರಕರಣ ಹಾಗೂ ಸಾವಿನಲ್ಲಿ ಅರ್ಧದಷ್ಟು ರಾಜಧಾನಿಯದ್ದಾಗಿದೆ. ಬೆಂಗಳೂರಿ ನಲ್ಲಿ 2,267 ಮಂದಿ ಸೋಂಕಿತರಾಗಿದ್ದು, 50 ಮಂದಿ ಸಾವಿಗೀಡಾಗಿದ್ದಾರೆ. 746 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರಿನ ಒಟ್ಟಾರೆ ಪ್ರಕರಣಗಳು 41 ಸಾವಿರಕ್ಕೇರಿದ್ದು, ಈ ಪೈಕಿ 30,561 ಮಂದಿ (ಶೇ.75ಕ್ಕೂ ಹೆಚ್ಚು) ಇಂದಿಗೂ ಚಿಕಿತ್ಸೆಯಲ್ಲಿದ್ದಾರೆ. 2,000ಕ್ಕೂ ಹೆಚ್ಚು ಸೋಂಕುಮುಕ್ತ
ಎರಡನೇ ದಿನವೂ 2,000ಕ್ಕೂ ಹೆಚ್ಚು ಚೇತರಿಸಿಕೊಂಡಿದ್ದಾರೆ. ಗುರುವಾರ 2,071 ಮಂದಿ, ಶುಕ್ರ ವಾರ 2,037 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯ ಗುಣಮುಖ ದರ ಶೇ.36.5, ಮರಣ ದರ ಶೇ.2, ಸೋಂಕು ಬೆಳವಣಿಗೆ ದರ ಶೇ.8ರಷ್ಟಿದೆ. ದ.ಕ., ಉಡುಪಿ: 370 ಪಾಸಿಟಿವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 180 ಮತ್ತು ಉಡುಪಿ ಜಿಲ್ಲೆಯಲ್ಲಿ 190 ಮಂದಿಗೆ ಶುಕ್ರವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ದ.ಕ.ದಲ್ಲಿ ಕಳೆದ ಎರಡು ದಿನಗಳಲ್ಲಿ ಮೃತಪಟ್ಟ 8 ಮಂದಿಯ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ದ.ಕ.ದಲ್ಲಿ 125 ಮತ್ತು ಉಡುಪಿಯಲ್ಲಿ 88 ಮಂದಿ ಶುಕ್ರವಾರ ಗುಣ ಹೊಂದಿದ್ದಾರೆ. ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 1,57,84,177 ಒಟ್ಟು ಸಾವು (ಜಗತ್ತು): 6,38,976 ಭಾರತ (ಸೋಂಕು): 13,23,471 ಚೇತರಿಕೆ: 8,47,803 ಸಾವು (ಭಾರತ): 31,112 ಕರ್ನಾಟಕ (ಸೋಂಕು): 85,870