Advertisement
ಈ ಪೈಕಿ ಸುಮಾರು 3 ಸಾವಿರ ವೆಂಟಿಲೇ ಟರ್‌ಗಳು ಸಿದ್ಧವಾಗಿದ್ದು, 1,300 ಸಾಧನ ಗಳನ್ನು ವಿವಿಧ ರಾಜ್ಯಗಳಿಗೆ ಕಳುಹಿಸಿ ಕೊಡಲಾಗಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕಾಗಿ 3,100 ಕೋಟಿ ರೂ.ಗಳನ್ನು ಮೀಸಲಿರಿಸಿದ್ದ ಪಿಎಂ ಕೇರ್ ಟ್ರಸ್ಟ್ ವಲಸೆ ಕಾರ್ಮಿಕರ ಕಾಳಜಿ, ವೆಂಟಿಲೇಟರ್‌ಗಳ ಖರೀದಿ ಮತ್ತು ಕೊರೊನಾ ತಡೆಗೆ ಅಗತ್ಯವಿರುವ ಇತರ ವೆಚ್ಚಗಳಿಗೆ ಈ ಹಣ ಬಳಸುವುದಾಗಿ ತಿಳಿಸಿತ್ತು. ಪ್ರಸ್ತುತ ಈ ಹಣದಲ್ಲಿ 2 ಸಾವಿರ ಕೋಟಿ ರೂ.ಗಳನ್ನು ಭಾರತದಲ್ಲೇ ತಯಾರಾಗುವ 50 ಸಾವಿರ ವೆಂಟಿಲೇಟರ್‌ಗಳ ಖರೀದಿಗೆ ವಿನಿಯೋಗಿಸ ಲಾಗಿದೆ. ಬಾಕಿ 1,100 ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಬಳಸುವಂತೆ ಸೂಚಿಸಿ ವಿವಿಧ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ.
ಸರಕಾರಿ ಕಚೇರಿಗಳಿಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳುವ ಉದ್ದೇಶಕ್ಕಾಗಿಯೇ ಇರುವ ಗವರ್ಮೆಂಟ್ ಇ- ಮಾರ್ಕೆಟ್ ಪ್ಲೇಸ್‌ನಲ್ಲಿ (ಜಿಇಎಂ) ಸರಕು ಮಾರಾಟ ಮಾಡು ವವರು ಆ ಸರಕುಗಳು ಯಾವ ದೇಶದ ಉತ್ಪನ್ನ ಎಂದು ನಮೂದಿಸಲು ಕೇಂದ್ರ ಸರಕಾರ ಆದೇಶ ಹೊರಡಿ ಸಿದೆ. ಈ ಮೂಲಕ ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸಲು ಕೈ ಜೋಡಿಸ ಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೇಳಿದೆ.