ದೆಹಲಿಯ ಭಾರತ ಮಂಟಪಂನಲ್ಲಿ “ವಿಶ್ವ ಆಹಾರ ಭಾರತ’ದ ಎರಡನೇ ಆವೃತ್ತಿಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ಕಳೆದ 9 ವರ್ಷಗಳಲ್ಲಿ ಭಾರತದ ಆಹಾರ ಸಂಸ್ಕರಣಾ ಸಾಮರ್ಥ್ಯವು ಗಮನಾರ್ಹ ಬೆಳವಣಿಗೆ ಕಂಡಿದೆ. ಇದು ಸಂಸ್ಕರಿಸಿದ ಆಹಾರದ ರಫ್ತಿನಲ್ಲಿ ಶೇ.150ರಷ್ಟು ಬೆಳವಣಿಗೆಗೆ ಕಾರಣವಾಗಿದೆ. ಆಹಾರ ಸಂಸ್ಕರಣಾ ವಲಯದ ಸಾಮರ್ಥ್ಯವೂ 12 ಲಕ್ಷ ಟನ್‌ಳಿಂದ 200 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ’ ಎಂದು ತಿಳಿಸಿದರು.
Advertisement
ಕಟಾವು ನಂತರದ ನಷ್ಟ ಹಾಗೂ ಆಹಾರ ವ್ಯರ್ಥ ಮಾಡುವುದನ್ನು ತಗ್ಗಿಸಲು ಒತ್ತು ನೀಡುವಂತೆ ಹೇಳಿದ ಅವರು, ಸಿರಿಧಾನ್ಯಗಳ ಬಳಕೆಯ ಪ್ರಯೋಜನದ ಕುರಿತು ಅರಿವು ಮೂಡಿಸುವಂತೆ ಹೇಳಿದರು. ನ.5ರವರೆಗೆ ನಡೆಯಲಿರುವ ಸಮಾವೇಶದಲ್ಲಿ 80ಕ್ಕೂ ಹೆಚ್ಚು ದೇಶಗಳ 200 ಪ್ರತಿನಿಧಿಗಳು ಭಾಗವಹಿಸಿದ್ದಾರೆ.