Advertisement
ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಕೊಳಗೇರಿಗಳು, ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೊಳಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಮತ್ತು ವಲಸಿಗ ಕಾರ್ಮಿಕರಿಗಾಗಿ ಆರಂಭಿಸಿರುವ ಪುನರ್ ವಸತಿ ಶಿಬಿರಗಳಲ್ಲಿ ಕುಟುಂಬವೊಂದಕ್ಕೆ ದಿನ ಒಂದು ಲೀಟರ್ ನಂತೆ ಹಾಲು ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ. ಇಂದಿನಿಂದ ಏ. 14ರವರೆಗೆ ಉಚಿತವಾಗಿ ಸರ್ಕಾರ ಕೆಎಂಎಫ್ ಮೂಲಕ ಹಾಲು ವಿತರಣೆ ಮಾಡಲಿದೆ ಎಂದರು.
Related Articles
Advertisement
ಮಕ್ಕಳಿಗೆ ಪಡಿತರ: ಜಿಲ್ಲೆಯ 1ರಿಂದ 10ನೇ ತರಗತಿಯ 1,36,590 ಮಕ್ಕಳಿಗೆ 21 ದಿನಗಳ ಮಧ್ಯಾಹ್ನ ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಿಸಲು 3530.16 ಕ್ವಿಂಟಾಲ್ ಅಕ್ಕಿ ಹಾಗೂ 1765.08 ಕ್ವಿಂಟಾಲ್ ತೊಗರಿ ಬೆಳೆ ವಿತರಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆ, ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಸವಣೂರು ಮತ್ತು ಶಿಗ್ಗಾಂವ ತಾಲೂಕು ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.