Advertisement

ಆ. 15ಕ್ಕೆ ಬಡವರಿಗೆ 5000 ಮನೆ ವಿತರಣೆ

12:44 PM May 26, 2021 | Team Udayavani |

ಬೆಂಗಳೂರು: ಪ್ರಧಾನಿಯವರ “ಎಲ್ಲರಿಗೂಸೂರು’ ಆಶಯದಂತೆ ನಗರ ಜಿಲ್ಲೆ ಯಲ್ಲಿ ಒಂದುಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಾನಾಹಂತದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ಆ.15ಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು5000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಬೆಂಗಳೂರು ನಗರ ಜಿಲ್ಲೆಯಲ್ಲಿ ಲಭ್ಯವಿರುವ 445 ಎಕರೆ ಸರ್ಕಾರಿ ಭೂಮಿಯನ್ನು ಪ್ರಧಾನಮಂತ್ರಿ ವಸತಿ ಯೋಜನೆಗಾಗಿ ರಾಜೀವ್‌ಗಾಂಧಿವಸತಿ ನಿಗಮಕ್ಕೆ ಹಸ್ತಾಂತರಿಸುವ ಸಂಬಂಧವಿಕಾಸಸೌಧದಲ್ಲಿ ಮಂಗಳವಾರ ಕಂದಾಯಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು.ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ “ಒಂದುಲಕ್ಷ ಬಹುಮಹಡಿ ವಸತಿ ಯೋಜನೆ’ಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

316 ಎಕರೆಯಲ್ಲಿ46,000ಮನೆಗಳನಿರ್ಮಾಣ ಕಾರ್ಯನಡೆದಿದ್ದುಕಾಮಗಾರಿ ನಾನಾ ಹಂತದಲ್ಲಿದೆ. ಆ. 15ರಂದುಸಿಎಂ 5000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ. ಪ್ರತಿ ಮನೆಗೆ ನಿಗದಿಪಡಿಸಿದ್ದ 7 ಲಕ್ಷ ರೂ.ದರವನ್ನು5ಲಕ್ಷ ರೂ.ಗೆ ಇಳಿಕೆ ಮಾಡಲಾಗಿದೆ.ಅಧಿಕಾರಿಗಳು ವಿಳಂಬ ಮಾಡಿದರೆ, ಕರ್ತವ್ಯನಿರ್ಲಕ್ಷ್ಯ ತೋರಿದರೆ ಕಠಿಣ ಶಿಸ್ತು ಕ್ರಮಕೆ Rಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೊಳಚೆ ಅಭಿವೃದ್ಧಿಮಂಡಳಿಮೂಲಕ 1.80 ಲಕ್ಷ ಮನೆ ನಿರ್ಮಾಣ ಕಾರ್ಯಆರಂಭವಾಗಿದ್ದು, ಕಾಮಗಾರಿ ನಾನಾ ಹಂತಗಳಲ್ಲಿಪ್ರಗತಿಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next