Advertisement

ಪ್ರತಿ ಠಾಣೆಯಲ್ಲೂ ವರ್ಷಕ್ಕೆ 5,000 ಸೈಬರ್‌ ಪ್ರಕರಣ ದಾಖಲು: Alok Mohan

02:41 PM Jan 26, 2024 | Team Udayavani |

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್‌ ಕ್ರೈಂ ಪ್ರಮಾಣವು ಮಿತಿ ಮೀರುತ್ತಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲ ಪೊಲೀಸ್‌ ಸಿಬ್ಬಂದಿಯೂ ಸೈಬರ್‌ ಕ್ರೈಂ ತನಿಖೆ ನಡೆಸಿ ಪ್ರಕರಣ ಭೇದಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌ ತಿಳಿಸಿದ್ದಾರೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಗುರುವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆಗಿನ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಗರದ ಪ್ರತಿ ಪೊಲೀಸ್‌ ಠಾಣೆಗಳಲ್ಲೂ ಸೈಬರ್‌ಗೆ ಸಂಬಂಧಿಸಿದ ವಾರ್ಷಿಕವಾಗಿ 4 ರಿಂದ 5 ಸಾವಿರ ಕೇಸ್‌ಗಳು ದಾಖಲಾಗುತ್ತಿವೆ.

ಒಂದು ಠಾಣೆಯ ಸಿಬ್ಬಂದಿಯಿಂದ 5 ಸಾವಿರ ಕೇಸ್‌ ಬೇಧಿಸುವುದು ಅಸಾಧ್ಯ. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

ಸೈಬರ್‌ ಕ್ರೈಂ ನಿಯಂತ್ರಿಸಲು ಪೊಲೀಸ್‌ ಇಲಾಖೆ ಪ್ರಯತ್ನಿಸುತ್ತಿದೆ. ಇನ್ನಷ್ಟು ದಕ್ಷತೆ ಹೆಚ್ಚಿಸುವ ಅಗತ್ಯವಿದೆ. ಪ್ರತಿ ಸೈಬರ್‌ ಠಾಣೆಗಳಲ್ಲಿ ಇದುವರೆಗೆ ಠಾಣಾಧಿ ಕಾರಿಯೇ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇನ್ನು ಮುಂದೆ ಸೈಬರ್‌ ಠಾಣೆಗಳಲ್ಲಿ ಡಿವೈಎಸ್‌ಪಿಗಳನ್ನು ನೇಮಿಸಲು ಚಿಂತಿಸಲಾಗಿದೆ. ಹೆಚ್ಚಿನ ಪ್ರಮಾಣದ ಸೈಬರ್‌ ಕ್ರೈಂ ಆರೋಪಿಗಳು ಸ್ಥಳೀಯರೇ ಆಗಿರುತ್ತಾರೆ. ಹೊರ ರಾಜ್ಯಗಳ ಸೈಬರ್‌ ಕಳ್ಳರ ಪತ್ತೆಗೆ ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿ ರೌಡಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಅಪರಾಧಗಳನ್ನು ನಿಯಂತ್ರಿಸುವುದು ಹಾಗೂ ಸಮರ್ಪಕವಾಗಿ ಪ್ರಕರಣದ ತನಿಖೆ ನಡೆ ಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚುವರಿ ಎಸ್‌ಪಿ-2 ಹುದ್ದೆಯನ್ನು ಭರ್ತಿಗೊಳಿ ಸಲಾಗುತ್ತಿದೆ. ಇದ ರಿಂದ ಶಿಕ್ಷೆಯ ಪ್ರಮಾಣ ಹೆಚ್ಚುವಂತೆ ಮಾಡಲಾ ಗು ವುದು ಎಂದು ಹೇಳಿದರು.

Advertisement

ಇನ್ನು ಬೆಂಗಳೂರಿನಲ್ಲಿ ಕಳೆದ 6 ತಿಂಗಳಿನಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಹಲವು ವಿಚಾರ ಚರ್ಚೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 20 ಸಾವಿರ ಪೊಲೀಸರಿದ್ದಾರೆ. ಪೊಲೀಸ್‌ ಬೀಟ್‌ ವ್ಯವಸ್ಥೆ ಬಲಪಡಿಸುವುದು, ವೈಜ್ಞಾನಿಕವಾಗಿ ಸಾಕ್ಷ್ಯ ಕಲೆ ಹಾಕುವುದು, ಸೈಬರ್‌ ಕ್ರೈಂ ಬೇದಿಸುವುದು, ರೌಡಿಗಳ ಮೇಲೆ ನಿಗಾ ಇಡುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಪೆಲೀಸರೊಂ ದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ 125 ಕೋಟಿ ರೂ. ಡ್ರಗ್ಸ್‌ ಜಪ್ತಿ 7 ಸಾವಿರಕ್ಕೂ ಹೆಚ್ಚು ಆರೋಪಿಗಳ ಬಂಧನ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿಯಾಗಿದೆ. 2023ರಲ್ಲಿ ರಾಜ್ಯದಲ್ಲಿ 125 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿ 7 ಸಾವಿರಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದೇವೆ. ವಿದೇಶಿ ಪೆಡ್ಲರ್‌ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಡಿಜಿಪಿ ಅಲೋಕ್‌ ಮೋಹನ್‌ ತಿಳಿಸಿದರು..

Advertisement

Udayavani is now on Telegram. Click here to join our channel and stay updated with the latest news.

Next