Advertisement

ಕರ್ತಾರ್ಪುರ ಕಾರಿಡಾರ್‌ ಬಳಿ 500 ವರ್ಷ ಹಳೆಯ ಬಾವಿ ಪತ್ತೆ

09:04 AM Apr 30, 2019 | Team Udayavani |

ಲಾಹೋರ್‌: ಗುರುನಾನಕ ದೇವ್‌ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಸುಮಾರು 500 ವರ್ಷ ಹಳೆಯ ಬಾವಿಯೊಂದು ಕರ್ತಾರ್ಪುರದಲ್ಲಿನ ಗುರುದ್ವಾರದ ಬಳಿ ಉತVನನದ ವೇಳೆ ಪತ್ತೆಯಾಗಿದೆ. ಕಾರಿಡಾರ್‌ಗಾಗಿ ಈ ಪ್ರದೇಶ ತೆರವುಗೊಳಿಸಿ ಉತVನನ ನಡೆಸಲಾಗುತ್ತಿತ್ತು. 20 ಅಡಿ ಅಗಲದ ಈ ಬಾವಿಯನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಕರ್ತಾರ್ಪುರಕ್ಕೆ ಬರುವ ಭಕ್ತರಿಗೆ ನೀರಿನ ದಾಹ ಇಂಗಿಸಿಕೊಳ್ಳುವುದಕ್ಕಾಗಿ ಈ ಬಾವಿಯನ್ನು ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ. ಈ ಬಾವಿಯ ನೀರಿನಲ್ಲಿ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಸಿಕ್ಖರು ನಂಬಿದ್ದರು.

Advertisement

ಗುರುನಾನಕರ 550ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತಿದೆ. ಕರ್ತಾರ್ಪುರದಿಂದ ಭಾರತದ ಗಡಿಯವರೆಗಿನ 4 ಕಿ.ಮೀ ದೂರದ ಶೇ. 50 ರಷ್ಟು ಕಾಮಗಾರಿ ಮುಗಿದಿದೆ. ಈ ವರ್ಷದ ನವೆಂಬರ್‌ನಲ್ಲಿ ಕಾರಿಡಾರ್‌ ಉದ್ಘಾಟಿಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next