Advertisement

500 ಕಡೆ ಭಗವದ್ಗೀತಾ ಉಪನ್ಯಾಸ ಆಯೋಜನೆ

05:31 PM Nov 01, 2022 | Team Udayavani |

ದಾವಣಗೆರೆ: ದಾವಣಗೆರೆ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನ ನ.3 ರಿಂದ ಡಿ. 4ರ ವರೆಗೆ ದಾವಣಗೆರೆಯಲ್ಲಿ ನಡೆಯಲಿದೆ ಎಂದು ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಗವದ್ಗೀತೆ ಸರ್ವಸ್ಪರ್ಶಿಯಾಗಬೇಕು. ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ಮತ್ತು ವ್ಯಕ್ತಿತ್ವ ವಿಕಸನದ ಮಹತ್ತರ ಉದ್ದೇಶದಿಂದ ದಾವಣಗೆರೆ ಸೇರಿದಂತೆ 25 ಜಿಲ್ಲೆಯಲ್ಲಿ ಏಕಕಾಲಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ದಾವಣಗೆರೆಯಲ್ಲಿ ನ. 3 ರಂದು ಅಭಿಯಾನ ಉದ್ಘಾಟನೆಗೊಂಡರೆ ಇನ್ನುಳಿದ ಕಡೆ ನ. 4 ರಿಂದ ಪ್ರಾರಂಭವಾಗಲಿದೆ ಎಂದರು. ಗುರುವಾರ ಮಧ್ಯಾಹ್ನ 3ಕ್ಕೆ ವಿದ್ಯಾನಗರ ಮುಖ್ಯರಸ್ತೆಯ ಮಾಗನೂರು ಬಸಪ್ಪ ವಿದ್ಯಾಸಂಸ್ಥೆ ಸಭಾಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ತಮ್ಮೊಂದಿಗೆ ಕಣ್ವಕುಪ್ಪೆ ಗವಿಮಠದ ಶ್ರೀ ಡಾ| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮೇಯರ್‌ ಜಯಮ್ಮ ಗೋಪಿನಾಯ್ಕ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌, ಡಿಡಿಪಿಐ ಜಿ.ಆರ್‌. ತಿಪ್ಪೇಶಪ್ಪ ಇತರರು ಭಾಗವಹಿಸುವರು ಎಂದು ತಿಳಿಸಿದರು.

2002ರ ಅ.28 ರಂದು ಹುಬ್ಬಳ್ಳಿಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಪ್ರಾರಂಭಿಸಲಾಯಿತು. ನಾಲ್ಕು ವರ್ಷಗಳ ಕಾಲ ಒಂದೇ ಕಡೆ ಅಭಿಯಾನ ನಡೆಸಲಾಗುತ್ತಿತ್ತು. ಆ ನಂತರ ಏಕಕಾಲಕ್ಕೆ ವಿವಿಧ ಜಿಲ್ಲೆಯಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನದ ಅಂಗವಾಗಿ ವಿವಿಧ ಹಂತದಲ್ಲಿ ಭಗವದ್ಗೀತೆಯ 5ನೇ ಅಧ್ಯಾಯದ ಕಂಠಪಾಠ, ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ.

ಶ್ಲೋಕ, ಉಪನ್ಯಾಸ, ಪುಸ್ತಕ ಬಿಡುಗಡೆ ಎಂಬ ಪ್ರಮುಖ ಮೂರು ಅಂಶಗಳೊಂದಿಗೆ ಅಭಿಯಾನ ನಡೆಯಲಿದೆ. ದಾವಣಗೆರೆ ಜಿಲ್ಲೆಯಲ್ಲಿ 500 ಭಾಗದಲ್ಲಿ ಭಗವದ್ಗೀತೆ ಉಪನ್ಯಾಸ ನಡೆಸಲಾಗುವುದು ಎಂದು ತಿಳಿಸಿದರು.ಅಭಿಯಾನದ ಹಿನ್ನೆಲೆಯಲ್ಲಿ ಡಿ.3 ರಂದು ದಾವಣಗೆರೆಯಲ್ಲಿ ಸಮಗ್ರ ಗೀತ ಪಠಣ ನಡೆಯಲಿದೆ. ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಗೀತೆಯ ಉಪದೇಶ ಮಾಡಿದ ದಿನದ ಸ್ಮರಣೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.4 ರಂದು ಬೆಳಗ್ಗೆ 11ಕ್ಕೆ ದಾವಣಗೆರೆಯಲ್ಲೇ ರಾಜ್ಯ ಮಟ್ಟದ ಮಹಾಸಮರ್ಪಣೆ ನಡೆಯಲಿದೆ. ಆ ಕಾರ್ಯಕ್ರಮದ ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದರು.

Advertisement

ಶ್ರೀ ಭಗವದೀYತಾ ಅಭಿಯಾನದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಡಾ| ಎಸ್‌.ಆರ್‌. ಹೆಗಡೆ, ಅಧ್ಯಕ್ಷ ಎಸ್‌ .ಟಿ. ಕುಸುಮಶೆಟ್ಟಿ, ಉಪಾಧ್ಯಕ್ಷ ಡಾ| ಬಿ.ಟಿ. ಅಚ್ಯುತ್‌, ಕಾರ್ಯದರ್ಶಿ ಎಚ್‌. ಜಯಪ್ಪ, ಸಂಚಾಲಕ ವಿನಾಯಕ ರಾನಡೆ, ಸಹ ಸಂಚಾಲಕ ವೈ. ಶಂಭುಲಿಂಗಪ್ಪ, ನಳಿನಿ ಅಚ್ಯುತ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next