Advertisement

ಕೂಡ್ಲಿಯಲ್ಲಿ 500 ಮುಡಿ ಭತ್ತದ ತಿರಿ…!

09:45 PM Dec 01, 2019 | Sriram |

ಬ್ರಹ್ಮಾವರ: ಭತ್ತದ ಕೃಷಿ ಕಡಿಮೆ ಯಾದಂತೆ ಸಂಭಂದಿತ ಚಟುವಟಿಕೆಗಳು ಮರೆಯಾಗುತ್ತಿವೆ. ಹಿಂದೆ ಬಹುತೇಕ ಮನೆ ಯಂಗಳದಲ್ಲಿ ಕಾಣಸಿಗುತ್ತಿದ್ದ ತಿರಿ ಇಂದು ತೀರಾ ಅಪರೂಪವೆನಿಸಿದೆ.

Advertisement

ತಿರಿ ರಚನೆ ಎನ್ನುವುದು ಭತ್ತವನ್ನು ಸಂರಕ್ಷಿಸಿ ಇರುವ ಕೌಶಲ್ಯಪೂರ್ಣ ಜತೆಗೆ ವಿಶಿಷ್ಟವಾದ ವಿಧಾನ. ಸಾಂಪ್ರದಾಯಿಕ ಶೈಲಿಯ ಈ ವಿಧಾನದಲ್ಲಿ ತಿಂಗಳುಗಟ್ಟಲೆ ಅತ್ಯಂತ ಸುರಕ್ಷಿತವಾಗಿ ಇಡಬಹುದಾಗಿದೆ.

ರಚನೆಯ ವಿಧಾನ:
ಮೊದಲು ಬುಡದಲ್ಲಿ ಒಣ ಹುಲ್ಲಿನ ಚಂಡೆ ರಚಿಸಲಾಗುತ್ತದೆ. ಬಳಿಕ ಆಧಾರಕ್ಕೆ 5 ಕೋಲು ಹುಗಿದು ಮಡೆ ಬಳ್ಳಿಯನ್ನು ಸುತ್ತುತ್ತಾ ಬಂದಂತೆ ಭತ್ತವನ್ನು ಸುರಿಯಲಾಗುತ್ತದೆ. ಕಾಣ ಕಾಣುತ್ತಲೆ ಮಡಕೆಯ ರೀತಿ ಸುಂದರ ಆಕೃತಿ ರಚಿಸಲ್ಪಡುತ್ತದೆ. ಮೊದಲು ಮಣ್ಣಿನ ಅಂಗಳ ಇರುವಾಗ ಬುಡಕ್ಕೆ ಭತ್ತದ ಹೊಟ್ಟು ಹಾಕುತ್ತಿದ್ದರು. ಮಡೆ ಬಳ್ಳಿ ಬದಲಿಗೆ ಈಗ ಬೀಣಿ ಬಳಕೆ ಮಾಡುತ್ತಿದ್ದಾರೆ. ಮೇಲೆ ಹುಲ್ಲಿನ ಹಾಸು ಮಾಡಲಾಗುತ್ತದೆ.

ಮೊದಲು ಬೆಳ್ತಿಗೆ ಹಾಗೂ ಕುಚ್ಚಿಗೆ ತಿರಿ ರಚಿಸುತ್ತಿದ್ದರು. ಬೆಳ್ತಿಗೆಯದ್ದು ಬೇಗ ಒಡೆದರೆ, ಕುಚ್ಚಿಗೆ ಮತ್ತೂ ಹೆಚ್ಚು ಸಮಯ ಇಡುತ್ತಿದ್ದರು.

ಬಾರಕೂರು ಕೂಡ್ಲಿ ಉಡುಪರ ಮನೆಯಲ್ಲಿ ಈ ವರ್ಷ ಸುಮಾರು 500 ಮುಡಿ(135 ಕ್ವಿಂಟಾಲ್‌) ಭತ್ತ ಸಂಗ್ರಹದ ಬೃಹತ್‌ ತಿರಿ ರಚಿಸಲಾಯಿತು.

Advertisement

ಪರಂಪರೆ ಉಳಿವು
ಕೃಷಿ ಚಟುವಟಿಕೆಗಳು ಮುಂದಿನ ತಲೆಮಾರಿಗೂ ತಲುಪಬೇಕು. ಸಾಂಪ್ರದಾಯಿಕ ವಿಧಾನ ಉಳಿಯಬೇಕು. ಈ ನಿಟ್ಟಿನಿಂದ ಹಿರಿಯರ ಆಶಯದಂತೆ ಶ್ರಮವಾದರೂ ತಿರಿ ನಿರ್ಮಿಸುತ್ತೇವೆ.
– ನಾಗರಾಜ ಉಳಿತ್ತಾಯ, ಚೆಗ್ರಿಬೆಟ್ಟು

10 ಮಂದಿಯ ತಂಡ
ಸುಮಾರು 7 ಎಕ್ರೆ ಸಾಗುವಾಳಿಯನ್ನು ಈಗಲೂ ಮಾಡುತ್ತಿದ್ದೇವೆ. ಹಿರಿಯರ ಅಸ್ತಿತ್ವದ ನೆನಪಿಗಾಗಿ, ಕೃಷಿ ಪರಂಪರೆ ಉಳಿವಿಗಾಗಿ ಪ್ರತಿವರ್ಷ ತಿರಿಯನ್ನೂ ರಚಿಸುತ್ತೇವೆ. ಮೂವರು ನುರಿತವರು ಸೇರಿದಂತೆ ಸುಮಾರು 10 ಮಂದಿಯ ತಂಡದಿಂದ ನಿರ್ಮಿಸಲಾಗಿದೆ.
– ಕೆ. ಶ್ರೀನಿವಾಸ ಉಡುಪ, ಕೂಡ್ಲಿ

-ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next