Advertisement

Airstrike: ಗಾಜಾ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ… ಕನಿಷ್ಠ 500 ಮಂದಿ ಮೃತ್ಯು

09:14 AM Oct 18, 2023 | Team Udayavani |

ಗಾಜಾಪಟ್ಟಿ: ಮಂಗಳವಾರ ರಾತ್ರಿ ಗಾಜಾಪಟ್ಟಿಯಲ್ಲಿರುವ ಆಸ್ಪತ್ರೆಯೊಂದರ ಮೇಲೆ ವೈಮಾನಿಕ ದಾಳಿ ನಡೆದು ಮಕ್ಕಳು ಮಹಿಳೆಯರು ಸೇರಿದಂತೆ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲಸ್ತೀನ್ ಅಧಿಕಾರಿಗಳು ಆರೋಪಿಸಿದ್ದಾರೆ.

Advertisement

ಹಮಾಸ್ ಕೂಡ ಇದು ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿ ಎಂದು ಆರೋಪಿಸಿದೆ ಆದರೆ ಈ ಆರೋಪಗಳನ್ನು ತಳ್ಳಿಹಾಕಿದ ಇಸ್ರೇಲ್ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನಿಂದ ತಪ್ಪಾಗಿ ಹಾರಿದ ರಾಕೆಟ್ ಆಸ್ಪತ್ರೆಗೆ ಅಪ್ಪಳಿಸಿದೆ ಎಂದು ಹೇಳಿಕೊಂಡಿದೆ.

ಬೈಡನ್‌ ಜೋರ್ಡಾನ್‌ ಭೇಟಿ ರದ್ದು:
ಇಸ್ರೇಲ್‌ಗೆ ಒಗ್ಗಟ್ಟು ವ್ಯಕ್ತಪಡಿಸಲು ಯುಎಸ್ ಅಧ್ಯಕ್ಷ ಜೋ ಬಿಡನ್ ಟೆಲ್ ಅವಿವ್‌ಗೆ ಭೇಟಿ ನೀಡಿದ ಮುನ್ನಾದಿನದಂದು ಈ ದಾಳಿ ನಡೆದಿದೆ.

ಅವಘಡದಿಂದಾಗಿ ಜೋರ್ಡಾನ್‌ನ ಅಮ್ಮನ್‌ನಲ್ಲಿ ಆಯೋಜಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಇತರ ಅರಬ್‌ ನಾಯಕರ ನಡುವಿನ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ. ಜೋರ್ಡಾನ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅವರು, ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಮತ್ತು ಪ್ಯಾಲೆಸ್ಟೀನ್‌ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಬೈಡ್‌ನ್‌ ನಡೆಸಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.

ಇಸ್ರೇಲ್ ಗೆ ಬೈಡನ್ ಭೇಟಿ:
ಗಾಜಾ ಮೇಲೆ ವೈಮಾನಿಕ ದಾಳಿಯಿಂದಾಗಿ ಜೋರ್ಡಾನ್‌ ಭೇಟಿ ರದ್ದು ಮಾಡಿದ ಅಮೆರಿಕ ಅಧ್ಯಕ್ಷ ಜೊ ಬೈಡನ್ ಇಂದು ಇಸ್ರೇಲ್‌ಗೆ ಮಾತ್ರ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ.

Advertisement

ಕುಸಿಯುವ ಬಿಟಿಯಲ್ಲಿ ಆಸ್ಪತ್ರೆ ಕಟ್ಟಡ:
ವೈಮಾನಿಕ ದಾಳಿಗಳಿಂದಾಗಿ ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ 30,000 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಈ ಕಟ್ಟಡ ಕೂಡ ವೈಮಾನಿಕ ದಾಳಿಗೆ ತುತ್ತಾಗುವ ಭೀತಿಯಲ್ಲಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Road collision: ಹೆದ್ದಾರಿ ಟೋಲ್‌ ಬಳಿ ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲೇ ನಾಲ್ವರು ಸಾವು

Advertisement

Udayavani is now on Telegram. Click here to join our channel and stay updated with the latest news.

Next