Advertisement

32 ಕೋಟಿ ರೂ.ಗಳಲ್ಲಿ 500 ಮನೆ ನಿರ್ಮಾಣ

05:45 PM Mar 14, 2022 | Team Udayavani |

ಕಡೂರು: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಕಡೂರು ಪುರಸಭೆ ವ್ಯಾಪ್ತಿಗೆ 500 ಮನೆ ನಿರ್ಮಾಣಕ್ಕೆ 32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.

Advertisement

ಮೂರ್ತಿಹಾಳ್‌ನಲ್ಲಿ ಭಾನುವಾರ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೂರು ಇಲ್ಲದವರಿಗೆ ಸೂರು ನೀಡಲು 2018ರಲ್ಲಿ ಜಾರಿಗೆ ತಂದಿದ್ದ ಈ ಯೋಜನೆ ಕೋವಿಡ್‌ ಕಾರಣದಿಂದ ತಡವಾಗಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ ಅವರ ಸಹಕಾರದಿಂದ ಕಡೂರು ಪಟ್ಟಣಕ್ಕೆ 500, ಬೀರೂರು ಪಟ್ಟಣಕ್ಕೆ 300 ಮನೆಗಳು ಮಂಜೂರಾಗಿ ಗುತ್ತಿಗೆದಾರರ ನೇಮಕವಾಗಿ ಇಂದು ಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಲಾಯಿತು ಎಂದರು.

ಕೊಳಚೆ ಅಭಿವೃದ್ಧಿ ಮಂಡಳಿಗೆ ಫಲಾನುಭವಿಗಳು ಡಿಡಿ ನೀಡುವುದರ ಮೂಲಕ ತಮ್ಮ ಮನೆ ಕಟ್ಟಲು ಖಾತ್ರಿ ಮಾಡಿಕೊಂಡು ಇಲಾಖೆಯು ತಿಳಿಸುವ ನಿಯಮಗಳನ್ನು ಪಾಲಿಸಿಕೊಂಡು ಗುಣಮಟ್ಟದ ಮನೆ ನಿರ್ಮಾಣಕ್ಕೆ ಮುಂದಾಗಿ ಎಂದು ಫಲಾನುಭವಿಗಳಿಗೆ ಶಾಸಕರು ಕರೆ ನೀಡಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ 28 ಸದಸ್ಯರೊಂದಿಗೆ ಸಹಕಾರದಿಂದ ಇದ್ದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಸಾರ್ವಜನಿಕರ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ತಾವು ರಾಜಕೀಯ ಭಾಷಣ ಮಾಡುವುದಿಲ್ಲ. ಅವರ ಹೇಳಿಕೆಗೆ ಉತ್ತರ ಸಹ ನೀಡುವುದಿಲ್ಲ. ಹೇಳಿಕೆ ನೀಡುವವರು ಹೇಳಿಕೆ ನೀಡಿ ಹಿಂದುಳಿಯುತ್ತಿದ್ದಾರೆ ಎಂದು ಟೀಕಾಕಾರರಿಗೆ ಟಾಂಗ್‌ ನೀಡಿದರು.

Advertisement

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಸರ್ವರಿಗೂ ಸೂರು ನೀಡುವ ಮಹತ್ವಕಾಂಕ್ಷೆಯ ಯೋಜನೆ ಜಾರಿಗೊಂಡು ಪಟ್ಟಣದಲ್ಲಿ 500ಕ್ಕೂ ಹೆಚ್ಚಿನ ಮನೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದ್ದಾರೆ ಎಂದರು.

ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿ, ದೀನ,ದಲಿತರ ಪರವಾಗಿ ಶಾಸಕರು ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಅವರು ಒಬ್ಬ ಪಕ್ಷಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.

ಪುರಸಭೆ ಸದಸ್ಯೆ ಜ್ಯೋತಿ ಆನಂದ್‌, ಮತ್ತೋರ್ವ ನಾಮ ನಿರ್ದೇಶಿತ ಸದಸ್ಯ ಎ.ಮಣಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ವಿಜಯ ಚಿನ್ನರಾಜು, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್‌, ಕಡೂರು ಪುರಸಭೆ ಸದಸ್ಯರಾದ ಲತಾ ರಾಜು, ಸುಧಾ ಉಮೇಶ್‌, ಗೋವಿಂದರಾಜ್‌, ಸಂದೇಶ್‌ ಕುಮಾರ್‌, ಸೋಮಣ್ಣ, ಮಂಡಿ ಇಕ್ಬಾಲ್‌, ಶ್ರೀಕಾಂತ್‌, ಯಾಸೀನ್‌, ಮರುಗುದ್ದಿ ಮನು, ಮೋಹನ್‌, ಷಡಕ್ಷರಿ ಮತ್ತು ಶಾಮಿಯಾನ ಚಂದ್ರು, ನಗರ ಘಟಕದ ಅಧ್ಯಕ್ಷ ಕೆ.ಬಿ. ಸೋಮೇಶ್‌, ಸಿದ್ದಪ್ಪ ಮಲ್ಲಿಕಾರ್ಜುನ್‌(ಮಲ್ಲು), ಕದಂಬ ವೆಂಕಟೇಶ್‌, ಮಂಜುನಾಥ್‌, ಕೊಳಚೆ ಅಭಿವೃದ್ಧಿ ಮಂಡಳಿಯ ಎಂಜಿನಿಯರ್‌ ಯಶವಂತ್‌ ಮತ್ತು ಶ್ರೀರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next