Advertisement

50 ವರ್ಷ ವಿಪಕ್ಷ ಪಟ್ಟ : ಕಾಂಗ್ರೆಸ್‌ ಪುನಶ್ಚೇತನಕ್ಕೆ ಪಟ್ಟು ಹಿಡಿದ ಹಿರಿಯರು

12:11 AM Aug 30, 2020 | sudhir |

ಹೊಸದಿಲ್ಲಿ: ಕಾಂಗ್ರೆಸ್‌ನಲ್ಲಿ ಒಳ ಬೇಗುದಿ ಮುಂದುವರಿದಿದ್ದು, ಆಂತರಿಕ ಚುನಾವಣೆ ಮೂಲಕ ಪೂರ್ಣಾವಧಿ ಅಧ್ಯಕ್ಷರ ಆಯ್ಕೆ ನಡೆಯಬೇಕು ಎಂದು ಪತ್ರ ಬರೆದಿದ್ದ ಪಕ್ಷದ ಹಿರಿಯ ನಾಯಕರು ತಮ್ಮ ಅಭಿಪ್ರಾಯವನ್ನು ಮತ್ತಷ್ಟು ಪ್ರಬಲವಾಗಿ ಸಮರ್ಥಿಸಿಕೊಂಡು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮುಖಂಡರ ಪೈಕಿ ಒಬ್ಬರಾದ ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ ಇನ್ನೂ 50 ವರ್ಷಗಳ ಕಾಲ ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಹಲವು ದಶಕಗಳಿಂದ ಪಕ್ಷದಲ್ಲಿ ಆಂತರಿಕ ಚುನಾವಣೆ ಮೂಲಕ ಕಾರ್ಯಕಾರಿ ಮಂಡಳಿ ಆಯ್ಕೆಯಾಗಿಲ್ಲ. ಇದಕ್ಕಾಗಿ 10-12 ವರ್ಷ ಗಳಿಂದ ಒತ್ತಾಯಿಸಲಾಗುತ್ತಿದೆ. ಚುನಾವಣೆ ಗಳಲ್ಲಿ ಕಾಂಗ್ರೆಸ್‌ ಪದೇ ಪದೆ ಸೋಲು ಅನುಭವಿಸುತ್ತಿದೆ. ಮರಳಿ ಪಕ್ಷವನ್ನು ಸದೃಢ ಗೊಳಿಸಲು ಆಂತರಿಕ ಚುನಾವಣೆ ನಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಆಂತರಿಕ ಚುನಾವಣೆ ವಿರೋಧಿಸುತ್ತಿ ರುವ ನಾಯಕರ ವಿರುದ್ಧ ಕಿಡಿಕಾರಿರುವ ಅಜಾದ್‌, ಎಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭೀತಿಯಿಂದ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಸ್ತರಗಳಲ್ಲೂ ಚುನಾವಣೆ ನಡೆಯಬೇಕು ಎಂದಿದ್ದಾರೆ.

ತಪ್ಪು ಗ್ರಹಿಕೆ
ಇದೇ ವೇಳೆ, ಮತ್ತೋರ್ವ “ಭಿನ್ನ ಮತೀಯ’ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಜಿತಿನ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದು, ಪತ್ರ ಕುರಿತು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸೋನಿಯಾ ಮತ್ತು ರಾಹುಲ್‌ ಗಾಂಧಿ ನಾಯಕತ್ವದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಪಕ್ಷವನ್ನು ಪುನಶ್ಚೇತನ ಗೊಳಿಸುವುದು, ಸಂಘಟನೆಯನ್ನು ಪ್ರಬಲ ಗೊಳಿಸಲು ಆತ್ಮಾವಲೋಕನ ಮಾಡಿಕೊಳ್ಳ ಬೇಕು ಎಂಬುದು ನಮ್ಮ ಸಲಹೆ ಎಂದಿದ್ದಾರೆ.

ಈ ಮಧ್ಯೆ ಉತ್ತರ ಪ್ರದೇ ಶದ ಕಾಂಗ್ರೆಸ್‌ ಮುಖಂಡರೊಬ್ಬರು, ಗುಲಾಂ ನಬಿ ಆಜಾದ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಪುನಶ್ಚೇತನ ಯೋಜನೆ ಅಗತ್ಯ
ಹಿರಿಯ ನಾಯಕ ಕಪಿಲ್‌ ಸಿಬಲ್‌ ಆಂಗ್ಲ ವಾಹಿನಿಯೊಂದರ ಜತೆ ಮಾತನಾಡಿ, ಆಂತರಿಕ ಚುನಾವಣೆಗೆ ನಾವು ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ ಈಗ ಐತಿ ಹಾಸಿಕವಾಗಿ ನೆಲಕಚ್ಚಿದೆ. ಇಂತಹ ಸಂದರ್ಭ ದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಯೋಜನೆ ಅಗತ್ಯ. ಇದರಲ್ಲಿ ನಾವು ಭಾಗೀದಾರ ರಾಗಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಪತ್ರವನ್ನು ಸರಿಯಾಗಿ ಅರ್ಥೈಸಿ ಕೊಂಡರೆ ನಾವು ಗಾಂಧಿ ಕುಟುಂಬವನ್ನು ಕಳೆಗುಂದಿಸುವ ಕೆಲಸವನ್ನು ಮಾಡಿಲ್ಲ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next