Advertisement
ಸೋಂಕು ತೀವ್ರತೆ ಹೆಚ್ಚಿರುವ ಪ್ರದೇಶದಲ್ಲಿ ಅತಿ ಹೆಚ್ಚುಪರೀಕ್ಷೆಗಳನ್ನು ನಡೆಸಿ ಶೀಘವೇ ಸೋಂಕಿತರನ್ನು ಪತ್ತೆಮಾಡಿ ಕ್ವಾರಂಟೈನ್/ ಚಿಕಿತ್ಸೆ ನೀಡಿದರೆ ಆತನಿಂದ ಮತ್ತೂಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು.ಇದು ಸೋಂಕನ್ನು ಹತೋಟಿಗೆ ತರುವ ಪ್ರಮುಖ ತಂತ್ರವಾಗಿದೆ. ಈ ಹಿಂದೆ ರಾಜ್ಯ ಸರ್ಕಾರವು ಕೂಡಾ ಇದನ್ನೆಮಾಡಿದ್ದು, ಮೊದಲ ಅಲೆ ತೀವ್ರವಾಗಿದ್ದ ಆಗಸ್ಟ್‌ನಲ್ಲಿನಿತ್ಯ 50 ಸಾವಿರ ನಡೆಯುತ್ತಿದ್ದ ಪರೀಕ್ಷೆಗಳನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದುಪ್ಪಟ್ಟು ಅಂದರೆ ಒಂದು ಲಕಕ್ಕೆ ಹೆಚ್ಚಿಸಿತ್ತು. ಸತತ 60 ದಿನ 1 ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಯುವ ಮೂಲಕ ಅಕ್ಟೋಬರ್ ಅಂತ್ಯಕ್ಕೆ ಸೋಂಕು ಅರ್ಧಕ್ಕರ್ದ ಕಡಿಮೆಯಾದವು. ಆನಂತರ ನವೆಂಬರ್,ಡಿಸೆಂಬರ್‌ನಲ್ಲೂ ಇದೇ ರೀತಿ ಪರೀಕ್ಷೆ ನಡೆಸಿ ವರ್ಷಾಂತ್ಯಕ್ಕೆ ಪರೀಕ್ಷೆಗೆ ತಕ್ಕ ಫಲವೆಂಬಂತೆ 11 ಸಾವಿರಕ್ಕೆ ಏರಿದ್ದ ಹೊಸ ಪ್ರಕರಣ ಒಂದು ಸಾವಿರಕ್ಕೆ ಇಳಿಕೆಯಾಗಿದ್ದವು.
Related Articles
Advertisement
ಪರೀಕ್ಷೆ ತಗ್ಗಿದರೂ,
ಹೊಸ ಪ್ರಕರಣಗಳು ಕುಗ್ಗಲಿಲ್ಲ:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಿತ್ಯ 10ಸಾವಿರದಂತೆ 50 ಸಾವಿರ ಪರೀಕ್ಷೆ ಕಡಿಮೆ ಮಾಡುತ್ತಾಬಂದರೂ ಹೊಸ ಪ್ರಕರಣಗಳು ಮಾತ್ರ ನಲವತ್ತುಸಾವಿರ ಆಸುಪಾಸಿನಲ್ಲಿಯೇ ಇವೆ. ಈ ಮೂಲಕಪರೀಕ್ಷೆ ಕಡಿಮೆ ಮಾಡಿ ಪ್ರಕರಣಗಳನ್ನು ಕಡಿಮೆಮಾಡಬಹುದು ಎಂಬ ಸರ್ಕಾರದ ಆಲೋಚನೆಹಿನ್ನಡೆಯಾಗಿದೆ.ಸೋಂಕು ಕಳೆದ ಬಾರಿಗಿಂತದುಪ್ಪಟ್ಟಾಗಿದ್ದು, ಪರೀಕ್ಷೆಯೂ ದುಪ್ಪಟ್ಟಾಗಬೇಕು. ಈಕುರಿತು ಸರ್ಕಾರ ಕ್ರಮಕೈಗೊಂಡರೇ ಸೋಂಕುಹತೋಟಿ ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.
ಸೋಂಕು ಹತೋಟಿಗೆ ಸರ್ಕಾರದಮುಂದೆ ಸದ್ಯ ಇರುವ ಮಾರ್ಗ ಅತಿಹೆಚ್ಚು ಪರೀಕ್ಷೆ ಮಾಡುವುದಾಗಿದೆ.ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರೀಕ್ಷೆನಡೆಸಬೇಕು. ಪರೀಕ್ಷೆ ಪ್ರಮಾಣ ಇಳಿಕೆಯುಸೋಂಕು ಹರಡುವಿಕೆ ಹಾದಿಯಾಗುತ್ತದೆ.
- ಡಾ.ಸುದರ್ಶನ್ ಬಲ್ಲಾಳ್,ತಜ್ಞರ ಸಲಹಾ ಸಮಿತಿ ಸದಸ್ಯರು,ಅಧ್ಯಕ್ಷರು ಮಣಿಪಾಲ್ ಆಸ್ಪತ್ರೆ