Advertisement

50 ರೂ. ಹೊಸ ನೋಟಲ್ಲಿ ಹಂಪಿ ಕಲ್ಲಿನ ರಥ

08:30 AM Aug 19, 2017 | |

ನವದೆಹಲಿ: ಅಪನಗದೀಕರಣ ಬಳಿಕ 500 ರೂ., 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಿರುವ ರಿಸರ್ವ್‌ ಬ್ಯಾಂಕ್‌ ಇದೀಗ ಹೊಸ 50 ರೂ. ನೋಟು ಬಿಡುಗಡೆಗೂ ಸಿದ್ಧವಾಗಿದೆ.

Advertisement

ಫ್ಲೋರೋಸೆಂಟ್‌ ನೀಲಿ ಬಣ್ಣದಲ್ಲಿರುವ ಈ ನೋಟಿನ ಹಿಂಭಾಗದಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವಿರುವುದು ವಿಶೇಷ. ಈ ನೋಟು 66ಮಿಮೀ135ಮಿಮೀ ಗಾತ್ರವಿದೆ. ಹಂಪಿ ಕಲ್ಲಿನ ರಥವನ್ನು ದೇಶದ ಸಂಸ್ಕೃತಿಯ ಗುರುತಾಗಿ ನೋಟಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಶೀಘ್ರ ಈ ಹೊಸ ನೋಟುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಆದಾಗ್ಯೂ ಹಳೆಯ 50 ರೂ. ನೋಟುಗಳು ಚಾಲ್ತಿಯಲ್ಲಿ ಮುಂದುವರಿಯಲಿವೆ.

ಅತ್ಯಾಧುನಿಕ ಭದ್ರತಾ ಅಂಶಗಳನ್ನು ಇದೂ ಹೊಂದಿದೆ. ದೇವನಾಗರಿ ಮತ್ತು ಇಂಗ್ಲಿಷ್‌ ಅಕ್ಷರದಲ್ಲಿ 50 ರೂ. ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next