Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಸಗೊಬ್ಬರದ ಅಭಾವ ಇರುವುದರಿಂದ ಬಿತ್ತನೆಗೆ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲೇ ಬಿತ್ತನೆಗೆ 15 ದಿನ ವಿಳಂಬ ಆಗಿದ್ದು, ಈಗ ಮಳೆ ಆಗಿದ್ದರೂ ರೈತರ ಹೊಲಗಳ ಬಿತ್ತನೆಗೆ ಗೊಬ್ಬರ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
Related Articles
Advertisement
ಸರಕಾರ ಸೋಯಾ ಅವರೆ ಸಬ್ಸಿಡಿಯಲ್ಲಿ ಬ್ಯಾಗ್ ಒಂದಕ್ಕೆ 2,970 ರೂ. ದರದಲ್ಲಿ ನೀಡುತ್ತಿದೆ. ಅದೇ ಬೀಜ ಮಾರುಕಟ್ಟೆಯಲ್ಲಿ 2700-2800 ರೂ. ದರದಲ್ಲಿ ಸಿಗುತ್ತಿದೆ. ಸರಕಾರ ನೀಡುವ ಸಬ್ಸಿಡಿ ಯಾರಿಗೂ ಲಾಭ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ್ ಜೋಳದಾಪಕೆ ಮಾತನಾಡಿದರು. ತಾಲೂಕು ರೈತ ಸಂಘದ ಉಪಾಧ್ಯಕ್ಷ ನಾಗಶೆಟ್ಟಿ ಖಂದಾರೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್ ಇನ್ನಿತರರು ಇದ್ದರು.
ಕಬ್ಬಿಗೆ 2,400 ರೂ. ದರ ನೀಡಲು ವಿಫಲ
ರೈತರು ಕಬ್ಬಿಗೆ 2,400 ರೂ. ದರ ನೀಡುವಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ವಿಫಲವಾಗಿವೆ ಎಂದು ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ದೂರಿದರು. ಈ ಹಿಂದೆ ನಡೆದ ಸಚಿವರ, ಡಿಸಿ ಸಭೆಯಲ್ಲಿ ಕಾರ್ಖಾನೆ ಮಾಲೀಕರಾದ ಪ್ರಕಾಶ ಖಂಡ್ರೆ, ಡಿ.ಕೆ. ಸಿದ್ರಾಮ ಅವರು ರೈತರ ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವುದಾಗಿ ಭರವಸೆ ನೀಡಿ ಈಗ 1,950 ರೂ. ದರ ನೀಡಿ ರೈತರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು. ಅದಲ್ಲದೇ ಎಂಜಿಎಸ್ ಎಸ್.ಕೆ. ಹೊರತುಪಡಿಸಿ ಉಳಿದ ಕಾರ್ಖಾನೆಗಳಿಗೆ ರೈತರಿಗೆ ಉಚಿತ ಸಕ್ಕರೆ ಕೊಟ್ಟಿಲ್ಲ ಎಂದು ತಿಳಿಸಿದರು.