Advertisement

ಅಗ್ನಿಪಥ ನಿಯಮಗಳಲ್ಲಿ ಬದಲು ಸಂಭವ: ಶೇ.50ಕ್ಕಿಂತ ಹೆಚ್ಚು ಅಗ್ನಿವೀರರ ನೇಮಕ?

09:53 PM Jul 09, 2023 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ “ಅಗ್ನಿಪಥ”ದ ಅನ್ವಯ ತರಬೇತಿ ಪಡೆಯುವ ಯೋಧರ ಪೈಕಿ ಶೇ.50ಕ್ಕಿಂತ ಹೆಚ್ಚು ಮಂದಿಯನ್ನು ಸೇನೆಗೆ ಸೇರ್ಪಡೆಗೊಳಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಹಲವು ಆಂಗ್ಲ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಂಭ್ಯಾವ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಈ ಬದಲಾವಣೆಗೆ ಮಾಡಲಾಗುತ್ತಿದೆ.

Advertisement

ಈಗಾಗಲೇ ಅಗ್ನಿವೀರರ ಪೈಕಿ ಶೇ.50 ಪರಿಣತರಿಗೆ ಶಾಶ್ವತ ನೇಮಕವನ್ನು ನೀಡಲು ಪ್ರಸ್ತಾಪಿಸಲಾಗಿದೆ. ಆದರೆ, ಅವರನ್ನೂ ವಿಮಾನಯಾನ, ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ನಂಥ ವಿಭಾಗಗಳಿಗೆ ಸೇರ್ಪಡೆಗೊಳಿಸಲು ಯೋಜಿಸಲಾಗಿದೆ. ಇದರಿಂದಾಗಿ ಸೈನಿಕ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಸಮಸ್ಯೆ ನಿಭಾಯಿಸಲು ಪರಿಣತ ಅಗ್ನಿವೀರರ ಶಾಶ್ವತ ನೇಮಕದ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಲು ಚಿಂತನೆ ನಡೆದಿದೆ.

ವಯಸ್ಸಿನ ಮಿತಿ ಹೆಚ್ಚಳ : ಸದ್ಯಕ್ಕೆ ಇರುವ ಅರ್ಹ ಅಭ್ಯರ್ಥಿಗಳ ವಯಸ್ಸು 17.5 ರಿಂದ 21ರವರೆಗೆ ನಿಗದಿ ಪಡಿಸಲಾಗಿದ್ದು, ಇದು ಪರಿಣತರನ್ನು ಆಯ್ಕೆ ಮಾಡಲು ಕಷ್ಟಕರವಾಗಬಹುದು. ಈ ಹಿನ್ನೆಲೆ ವಯಸ್ಸಿನ ಮಿತಿಯನ್ನು 23ಕ್ಕೆ ಏರಿಕೆ ಮಾಡಲೂ ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖೀಸಲಾಗಿದೆ.
2026ರ ವರೆಗೆ ಅಗ್ನಿಪಥ ಯೋಜನೆ ಅನ್ವಯ 1.75 ಲಕ್ಷ ಅಗ್ನಿವೀರರ ನೇಮಕಕ್ಕೆ ಯೋಜಿಸಲಾಗಿದೆ. ಭವಿಷ್ಯದಲ್ಲಿ ಗಡಿ ಸಮಸ್ಯೆಗಳು ಉದ್ವಿಗ್ನಗೊಳ್ಳುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲದ ಕಾರಣ, ಅಗ್ನಿವೀರರ ನೇಮಕಾತಿ ಹೆಚ್ಚಳದ ಬಗ್ಗೆ ಗಮನಹರಿಸುವುದು ಸೂಕ್ತವೆಂದು ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next