Advertisement

ಒಡೆಯರ ಕಾಲದಲ್ಲೇ ಶೇ.50 ಮೀಸಲಾತಿ

12:44 PM Apr 28, 2018 | |

ಮೈಸೂರು: ಇತ್ತೀಚಿಗೆ ಕಾನೂನು ರೂಪಿಸುವ ಸ್ಥಳದಲ್ಲಿ ಮನುವಾದಿಗಳು ಕುಳಿತಿರುವುದರಿಂದ ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ಬದಲಿಸುವ ಕೆಲಸ ಮಾಡುತ್ತಿರುವ ಮನುವಾದಿಗಳಿಂದ ದೇಶವನ್ನು ರಕ್ಷಿಸಬೇಕಿದೆ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರವಾದಿ ಡಾ. ಶಿವಕುಮಾರ್‌ ಹೇಳಿದರು. 

Advertisement

ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆಗಳು ಆಯೋಜಿಸಿದ್ದ  ಡಾ.ಬಿ.ಆರ್‌.ಅಂಬೇಡ್ಕರ್‌ 125ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಮಹನೀಯರ ಹೋರಾಟದ ಫ‌ಲವಾಗಿ ಸಂವಿಧಾನದ ಆಶಯಗಳಡಿ ಆಡಳಿತದಲ್ಲಿ ಎಲ್ಲಾ ವರ್ಗದ ಜನರಿಗೆ ನೀಡಿರುವ ಪ್ರಾತಿನಿದ್ಯ ಕಸಿದುಕೊಳ್ಳಲಾಗುತ್ತಿದೆ. ತಮಗೆ ಬೇಕಾದ ರೀತಿಯಲ್ಲಿ ಕಾನೂನು ಬದಲಾಯಿಸುವುದರ ಪರಿಣಾಮ ಶಿಕ್ಷಣ ದುಬಾರಿಯಾಗುತ್ತಿದೆ.

ಇದೇ ರೀತಿಯಲ್ಲಿ ಮುಂದುವರಿದರೆ ಮುಂದೆ ಕೇವಲ ಉಳ್ಳವರು ಮಾತ್ರ ಉನ್ನತ ಶಿಕ್ಷಣ ಪಡೆಯುವಂತಾಗಲಿದೆ ಎಂದು ಹೇಳಿದರು. ಖಾಸಗೀಕರಣ, ಜಾಗತೀಕರಣ, ಉದಾರೀಕರಣದ ಪರಿಣಾಮ ಇಂದು ಮಿಲಿಟರಿ ಹೊರತುಪಡಿಸಿ ಎಲ್ಲಾ ಸರ್ಕಾರಿ ಇಲಾಖೆಗಳು ಖಾಸಗೀಕರಣಗೊಳ್ಳುತ್ತಿವೆ. ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ ಕೊಡುಗೆ ಅಪಾರ: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಸ್ವಾತಂತ್ರ, ಪ್ರಜಾಪ್ರಭುತ್ವ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಕೊಡುಗೆ ಅಪಾರ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಸೇರಿದಂತೆ ಮೈಸೂರು ಅರಸರು, ದಿವಾನರಾದ ಶೇಷಾದ್ರಿ ಅಯ್ಯರ್‌, ಡಾ.ಆರ್‌.ಸಿ.ರೆಡ್ಡಿ ಸೇರಿದಂತೆ ಅನೇಕರು ದಲಿತರಿಗೆ,

ಹಿಂದುಳಿದವರ ಏಳಿಗೆಗೆ ಶೇ.50 ಮೀಸಲಾತಿ ಒದಗಿಸುವ ಕೆಲಸ ಮಾಡಿದ್ದಾರೆ. ಬ್ರಿಟಿಷರು ದೇಶ ಬಿಟ್ಟು ಹೋದ ಬಳಿಕ ಶಿಕ್ಷಣ ಪಡೆದ ಬ್ರಾಹ್ಮಣರು, ಕ್ಷತ್ರಿಯರು ಮಾತ್ರ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿದ್ದರು. ಆದರೆ ಆಡಳಿತದಲ್ಲಿ ಎಲ್ಲಾ ವರ್ಗದವರು ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಮೈಸೂರು ಸಂಸ್ಥಾನ ಮೀಸಲಾತಿ ಮೂಲಕ ಎಲ್ಲರಿಗೂ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ, ಶಾರದಾ ವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಸ್‌.ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಚ್‌.ಕೆ.ಶ್ರೀನಾಥ್‌ ಹಾಜರಿದ್ದರು.

ಮೈಸೂರು ಸಂಸ್ಥಾನದಲ್ಲಿ ಅಂಬೇಡ್ಕರ್‌ ಆಶಯಗಳಂತೆ ಸಂವಿಧಾನ ರಚನೆಗೂ ಮುನ್ನವೇ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಜ್ಞರ ಸಮಿತಿ ರಚಿಸಲಾಗಿದೆ. ಶಿಕ್ಷಣ, ಉದ್ಯೋಗ, ಸಮಾನತೆ ದೊರಕಿಸಿಕೊಡುವಲ್ಲಿ ಶ್ರಮಿಸಿದೆ. 
-ಯದುವೀರ್‌ ಒಡೆಯರ್‌

Advertisement

Udayavani is now on Telegram. Click here to join our channel and stay updated with the latest news.

Next