Advertisement

ಶೇ. 50 ಮೀಸಲು ಮಿತಿ ಹೆಚ್ಚಳವಿಲ್ಲ : ಸುಪ್ರೀಂ

12:51 AM May 06, 2021 | Team Udayavani |

ಹೊಸದಿಲ್ಲಿ: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಮರಾಠಿಗರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್‌, ರಾಜ್ಯ ಸರ್ಕಾರಗಳಿಗೆ ಶೇ.50ಕ್ಕಿಂತ ಹೆಚ್ಚು ಮೀಸಲು ಮಿತಿ ಹೆಚ್ಚಿಸುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿದೆ. ಈ ಮೂಲಕ ಕರ್ನಾಟಕದಲ್ಲಿನ ಮೀಸಲಾತಿ ಹೋರಾಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.

Advertisement

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌.ಎನ್‌.ರಾವ್‌, ಹೇಮಂತ್‌ ಗುಪ್ತಾ, ಎಸ್‌.ರವೀಂದ್ರ ಭಟ್‌ ಮತ್ತು ಎಸ್‌ ಅಬ್ದುಲ್‌ ನಜೀರ್‌ ಅವರಿದ್ದ ಸಾಂವಿಧಾನಿಕ ಪೀಠ ಮೀಸಲಾತಿ ಹೆಚ್ಚಳ ಸಂಬಂಧ ರಾಷ್ಟ್ರಪತಿಯವರಷ್ಟೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತೀರ್ಪು ನೀಡಿದೆ. ಮಂಡಲ್‌ ತೀರ್ಪು ಮರುಪರಿಶೀಲನೆಗಾಗಿ ಒಂಭತ್ತು ನ್ಯಾಯಮೂರ್ತಿಗಳ ಪೀಠ ರಚಿಸಬೇಕು ಎಂಬ ಮನವಿಯನ್ನೂ ಪೀಠ ತಿರಸ್ಕರಿಸಿದ್ದು, ಈಗಾಗಲೇ ಹಲವು ಬಾರಿ ಮಂಡಲ್‌ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ. ಇದಕ್ಕೆ ಪೂರಕವಾಗಿ ತೀರ್ಪನ್ನೂ ನೀಡಲಾಗಿದೆ. ಹೀಗಾಗಿ, ಮತ್ತೂಮ್ಮೆ ಮರುಪರಿಶೀಲನೆ ಅಗತ್ಯವಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಅಭಿಪ್ರಾಯ :

102ನೇ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆಯುಂಟು. ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್‌ಇಬಿಸಿ)ಗಳನ್ನು ಗುರುತಿಸುವ ಅಧಿಕಾರ ರಾಷ್ಟ್ರಪತಿಗಳಿಗಷ್ಟೇ ಇದೆ.

ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಹಾಗೆಯೇ ಹೊಸ ಪಟ್ಟಿ ಹೊರಡಿಸುವವರೆಗೆ ಹಳೇ ಪಟ್ಟಿ ಮುಂದುವರಿಯಬಹುದು.

Advertisement

ಮಹಾರಾಷ್ಟ್ರ ಸರ್ಕಾರ ನೀಡಿರುವ ಮೀಸಲಾತಿ ಅಸಾಂವಿಧಾನಿಕ. ಆದರೂ, ಬಾಂಬೆ ಹೈಕೋರ್ಟ್‌ ನ ಆದೇಶದ ನಂತರ ಉದ್ಯೋಗ, ಸ್ನಾತಕೋತ್ತರ ಪದವಿಗೆ ಮೀಸಲಲು ಪಡೆದಿರುವವರಿಗೆ ಆತಂಕವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next