Advertisement
ನಿರಂತರ ಅಲೆದಾಟದ ಫಲವಾಗಿ ಇಲ್ಲಿನ ಕೊರಗ ಕುಟುಂಬಕ್ಕೆ ಸರಕಾರ 2011ರಲ್ಲಿ ನಿವೇಶನ ಹಕ್ಕು ಪತ್ರ ನೀಡಿದ್ದರೂ, ವಾಸ ಜಾಗವನ್ನು ತೋರಿಸಿ ರಲಿಲ್ಲ. ಈಗ ಹಂಚಿಕೆಯಾಗಿವ ಭೂಮಿಯು ವಾಸ ಯೋಗ್ಯವಾಗಿಲ್ಲದೇ ಇರುವುದರಿಂದ ಕೊನೆಯ ಪ್ರಯತ್ನವಾಗಿ ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡಿದ್ದೇವೆ ಎಂದರು.
Related Articles
2013 ಮಾರ್ಚ್‌ನಲ್ಲಿ ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ಈ ಭೂಮಿ ಸಮತಟ್ಟು ಮಾಡಲು 1.5 ಲಕ್ಷ ರೂ., ಮಂಜೂರಾಗಿ ಅದರಲ್ಲಿ 97 ಸಾವಿರ ರೂ., ಬಿಡುಗಡೆಯಾಗಿದ್ದು ಆ ಹಣವು ಏನಾಗಿದೆ ಎಂಬುದು ತಿಳಿದು ಬಂದಿಲ್ಲ. 2013-2014ರಲ್ಲಿ ಇದೇ ಕೆಲಸಕ್ಕಾಗಿ 3 ಲಕ್ಷ ರೂ., ಅನುದಾನಕ್ಕೆ ಕಾರ್ಯಪಾಲಕ ಎಂಜಿನಿಯರ್ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆಯೂ ವಿವರಗಳಿಲ್ಲ. ಈ ಹಿಂದೆ ಕರ್ತವ್ಯ ಲೋಪಮಾಡಿದ್ದ ಗಿರಿಜನ ಯೋಜನಾ ಸಮನ್ವಯಾಧಿಕಾರಿ ವಿರುದ್ಧ ಕೊರಗರ ಅಹವಾಲು ಸ್ವೀಕರಿಸಿದ ರಾಜ್ಯ ಲೋಕಾಯುಕ್ತ ನೋಟಿಸು ನೀಡಿ ತನಿಖೆ ನಡೆಸಿದ್ದರು. ಕಾಲ ನಿಗೆ ರಸ್ತೆ, ನಳ್ಳಿನೀರು, ವಿದ್ಯುತ್ ಸಹಿತ ಇನ್ನಿತರ ಸೌಕರ್ಯಗಳನ್ನು ಒದಗಿಸಲು ಬಿಡುಗಡೆ ಮಾಡಲಾಗಿದ್ದ 50 ಲಕ್ಷ ರೂ., ಹೇಗೆ ವ್ಯಯಿಸಲಾಗಿದೆ ಎಂಬ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಡಾ| ಶಾನ್‌ಭಾಗ್ ದೂರಿದರು.
Advertisement
ಮಳೆಗೆ ಕೊಚ್ಚಿಹೋದ ತಡೆಗೋಡೆಪ್ರತಿಭಟನೆ, ಲೋಕಾಯುಕ್ತ ನೋಟೀಸ್‌ಗೆ ಉತ್ತರಿಸಲಾಗದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಸರದಲ್ಲಿ ಕೊಂಡಾಡಿ ಜಾಗದಲ್ಲಿ 50 ಲಕ್ಷ ರೂ., ವೆಚ್ಚ ಮಾಡಿ 18 ಅಡಿ ಎತ್ತರದ ತಡೆಗೋಡೆಗಳನ್ನು ಕಟ್ಟಿ, ಗುಡ್ಡ ಕೊರೆದು ಮೂರು ಹಂತಗಳಲ್ಲಿ ಸಮತಟ್ಟು ಮಾಡಿ ನಿವೇಶನಗಳನ್ನು ನೀಡಿದರು. ಇದೀಗ ವರ್ಷದ ಮಳೆಗೆ ಗುಡ್ಡ ಜರೆದಿದ್ದು, ತಡೆಗೋಡೆ ನೆಲಸಮವಾಗಿದೆ. ಅತ್ಯಂತ ಕಳಪೆ ಗುಣಮಟ್ಟದಲ್ಲಿ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಇಷ್ಟೆಲ್ಲಾ ನಡೆದು ನಿವೇಶನಗಳು ಅಸುರಕ್ಷಿತವಾಗಿದ್ದರೂ ಅಲ್ಲಿಯೇ ಮನೆ ಕಟ್ಟಿಕೊಳ್ಳಿ ಎಂದು ನಿರ್ದಯ ಅಧಿಕಾರಿಗಳು ಅಸಹಾಯಕ ಕೊರಗರನ್ನು ಒತ್ತಾಯಿಸುತ್ತಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೇಳಿದಂತೆ ಕೊರಗರು ಮನೆ ಕಟ್ಟಿಕೊಂಡಿದ್ದಲ್ಲಿ ಈಗಾಗಲೇ ಹಲವಾರು ಹೆಣ ಬೀಳುತ್ತಿದ್ದವು. ಈ ಹಗರಣದ ನ್ಯಾಯಾಂಗ ತನಿಖೆ ಆಗಬೇಕು ಎಂದು ಡಾ| ರವೀಂದ್ರನಾಥ್ ಶಾನ್‌ಬಾಗ್ ಒತ್ತಾಯಿಸಿದ್ದಾರೆ.