Advertisement

ಮಜಲು ಕಿಂಡಿ ಅಣೆಕಟ್ಟು ದುರಸ್ತಿಗೆ 50 ಲ.ರೂ. ಅನುದಾನ

09:36 PM Feb 26, 2021 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮವಾಗಿ ಹರಿಯುವ ಮೃತ್ಯುಂಜಯ ನದಿಗೆ ಕಾಪು ಹಾಗೂ ಮಜಲು ವ್ಯಾಪ್ತಿಯ ಕೃಷಿ ನೀರಿನ ಅನುಕೂಲಕ್ಕಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ನಿರ್ವಹಣೆಗಾಗಿ ಮಳೆ ಹಾನಿ ಯೋಜನೆಯಡಿ ಅನುದಾನ ಬಿಡುಗಡೆಗೊಂಡಿದ್ದು, ಸಣ್ಣ ನೀರಾವರಿ ಇಲಾಖೆ ವತಿಯಿಂದ ದುರಸ್ತಿ ಕಾಮಗಾರಿ ಶೀಘ್ರ ಆರಂಭವಾಗಲಿದೆ.

Advertisement

ಮಜಲು ವ್ಯಾಪ್ತಿಯ ನೀರಿನ ವ್ಯವಸ್ಥೆಯ ಕಾಲುವೆ, ತಡೆಗೋಡೆ ಸಂಪೂರ್ಣ ಹಾನಿಗೊಳಗಾಗಿದ್ದು, ಇದರಿಂದ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯವಾಗಿ ಕಿಂಡಿ ಅಣೆಕಟ್ಟಿನ ನೀರಿನ ವ್ಯವಸ್ಥೆಗೆ ಸಮಸ್ಯೆ ಎದುರಾಗಿತ್ತು. ಈ ಕುರಿತು ಡಿ.2ರಂದು ಉದಯವಾಣಿ ಸುದಿನ ಆವೃತ್ತಿಯಲ್ಲಿ ವರದಿ ಪ್ರಕಟಿಸಲಾಗಿತ್ತು.

ಅನುದಾನ ಬಿಡುಗಡೆ :

ವರದಿ ಆಲಿಸಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಮಜಲು ಭಾಗದ ಕಿಂಡಿ ಅಣೆಕಟ್ಟಿನ ದುರಸ್ತಿ ಕಾಮಗಾರಿಗೆ ಮಳೆಹಾನಿ ಯೋಜನೆಯಡಿ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ದುರಸ್ತಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಈ ಕುರಿತಾಗಿ ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ರಾಕೇಶ್‌ ಹಾಗೂ ಕಾಮಗಾರಿ ಗುತ್ತಿಗೆದಾರರು ಕಿಂಡಿ ಅಣೆಕಟ್ಟಿನ ಭಾಗದ ಸ್ಥಳ ವೀಕ್ಷಣೆ ನಡೆಸಿದರು. ಕಜೆ ವೆಂಕಟೇಶ್ವರ ಭಟ್‌ ಜತೆಗಿದ್ದರು.

 ಪ್ರವಾಹಕ್ಕೆ ತುಂಬಿದ ಹೂಳು :

Advertisement

ಕಳೆದ ವರ್ಷದ ಪ್ರವಾಹಕ್ಕೆ ಹಾಗೂ ಮೃತ್ಯುಂಜಯ ನದಿಯ ನದಿ ನೀರಿನ ಸೆಳೆತಕ್ಕೆ ತತ್ತರಿಸಿ ಸುಮಾರು 500 ಮೀಟರ್‌ ವ್ಯಾಪ್ತಿಯ ಮಜಲು ಭಾಗದ ಕಾಲುವೆ ಕೊಚ್ಚಿ ಹೋಗಿ ಸಂಪೂರ್ಣ ಶಿಥಿಲಗೊಂಡಿತ್ತು. ಈ ಭಾಗದ 26 ಮನೆ ಮಂದಿ ಇದೇ ನೀರನ್ನು ಆಶ್ರಯಿಸುತ್ತಿದ್ದಾರೆ. ದುರಸ್ತಿ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಕಾಮಗಾರಿಗೆ ಅನುದಾನ ಬಿಡುಗಡೆಯಾಗುವ ಮೂಲಕ ಈ ಭಾಗದ ಮಂದಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next