ಮೊಗವೀರಪಟ್ಣ ಬಳಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ನಡೆದ ಹಿನ್ನೆಲೆ ಯಲ್ಲಿ ಕಡಲ್ಕೊರೆತದ ಸಮಸ್ಯೆ ಕಡಿಮೆ ಯಿದ್ದರೂ ಮೊಗವೀರಪಟ್ಣ ಮತ್ತು ಕೈಕೋ ಸಂಪರ್ಕಿಸುವ ಸೋಲಾರ್ ಕ್ಲಬ್ ಬಳಿ ಕಡಲ್ಕೊರೆತದ ಸಮಸ್ಯೆ ಉದ್ಭವಿಸಿದ್ದು ನಾಲ್ಕೈದು ಮನೆಗಳು ಅಪಾಯದಲ್ಲಿವೆ.
Advertisement
ಕಿಲೆರಿಯಾನಗರ, ಕೈಕೋ: ಮುಗಿಯದ ಸಮಸ್ಯೆಮೊಗವೀರಪಟ್ಣ ಬೀಚ್‌ವರೆಗೆ ಶಾಶ್ವತ ಕಾಮಗಾರಿಯಿಂದ ಸಮಸ್ಯೆ ಕಡಿಮೆಯಿದ್ದರೂ ಸಮ್ಮರ್ ಸ್ಯಾಂಡ್ ಬೀಚ್‌ನಿಂದ ಕೈಕೋ, ಕಿಲೇರಿಯಾನಗರ, ಮುಕ್ಕಚ್ಚೇರಿ, ಸೀಗ್ರೌಂಡ್‌ವರೆಗೆ ಕಡಲ್ಕೊರೆತದ ಸಮಸ್ಯೆ ಉದ್ಭವಿಸಿದ್ದು ಈ ಭಾಗಗಳಲ್ಲಿ ಇರುವ ಸುಮಾರು 39ಕ್ಕೂ ಹೆಚ್ಚು ಮನೆಗಳು, ಎರಡು ಮಸೀದಿಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಈ ಪ್ರದೇಶದಲ್ಲಿ ಹಾಕಿರುವ ತಾತ್ಕಾಲಿಕ ತಡೆಗೋಡೆ ಸಮುದರ ಪಾಲಾಗುತ್ತಿದೆ. ಸಮುದ್ರದ ಅಲೆಗಳು ಮನೆಗಳಿಗೆ ಆಪ್ಪಳಿಸುತ್ತಿರುವುದರಿಂದ ಕೆಲವು ಮನೆಗಳು ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಮೊದಲ ದಿನದ ಗಾಳಿಮಳೆಗೆ ಸಮುದ್ರದ ಅಬ್ಬರಕ್ಕೆ ಸಮ್ಮರ್ ಸ್ಯಾಂಡ್ ಬೀಚ್ ತಡೆಗೋಡೆಗಳು ಸಮುದ್ರಪಾಲಾದರೆ, ಕಟ್ಟಡಕ್ಕೆ ಹಾನಿಯಾಗಿದ್ದು ಸಮುದ್ರಪಾಲಾಗುವ ಭೀತಿಯಲ್ಲಿದೆ. ಬೀಚ್ ಬಳಿ ಅಳವಡಿಸಲಾಗಿದ್ದ ಇಂಟರ್‌ಲಾಕ್‌ಗಳನ್ನು ಮತ್ತು ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ರೆಸಾರ್ಟನ ಕಾರ್ಮಿಕರು ನಡೆಸಿದರು.
ಒಂದೆಡೆ ತಾತ್ಕಾಲಿಕ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದರೆ ಇನ್ನೊಂದೆಡೆ ಲಾರಿಗಳಲ್ಲಿ ಕಲ್ಲುಗಳನ್ನು ತಂದುಹಾಕುವ ಕಾಮಗಾರಿ ಮುಂದುವರಿದಿದೆ. ಟಿಪ್ಪರ್‌ಗಳಲ್ಲಿ ಬರುವ ಕಲ್ಲುಗಳನ್ನು ಜೆಸಿಬಿ ಮೂಲಕ ಜೋಡಣೆ ಕಾರ್ಯ ಮುಂದು ವರಿದಿದ್ದು, ಸ್ಥಳದಲ್ಲಿ ಕೌನ್ಸಿಲರ್‌ಗಳಾದ ಬಶೀರ್, ಮಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಸ್ಥಳದಲ್ಲಿದ್ದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಉಚ್ಚಿಲ ಫೆರಿಬೈಲ್ ಪ್ರದೇಶದಲ್ಲಿ ಹಾನಿ
ಉಚ್ಚಿಲ ಫೆರಿಬೈಲ್ ಮತ್ತು ಬಟ್ಟಪ್ಪಡಿಯಲ್ಲಿ ಕಡಲ್ಕೊರೆತದಿಂದ ಹಾನಿಯಾಗಿದೆ. ಶಾಶ್ವತ ಕಾಮಗಾರಿಯ ಮೂರು ಬಮ್ಸ್ì ರಚನೆ ಮಾಡತ್ರ ಆಗಿದ್ದು, ಉಳಿದ ಪ್ರದೇಶದಲ್ಲಿ ಕಾಮಗಾರಿ ಆಗಬೇಕಾಗಿದ್ದು, ಫೆರಿಬೈಲು ಬಳಿ ಎರಡು ಕಡೆ ಕಲ್ಲು ಹಾಕಿ ಒಂದು ಕಡೆ ಖಾಲಿ ಬಿಟ್ಟಿದ್ದು ಅದೇ ಸ್ಥಳದಲ್ಲಿ ಕಡಲ್ಕೊರೆತ ಆಗಿದ್ದು ಸುಮಾರು 8ಕ್ಕೂ ಅಧಿಕ ಮನೆಗಳು ಅಪಾಯದಲ್ಲಿವೆ. ಇದರೊಂದಿಗೆ ಉಚ್ಚಿಲ ಬೀಚ್ ರಸ್ತೆಯೂ ಸಮುದ್ರ ಪಾಲಾಗುವ ಭೀತಿಯಿದೆ.
ಸ್ಥಳಕ್ಕೆ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಸದಸ್ಯ ರವಿಶಂಕರ್. ಸೋಮೇಶ್ವರ ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿದರು.