Advertisement
2005ರಲ್ಲಿ ಪತ್ತೆಯಾದ ಕಳೇಬರ ಹಾವಿನದ್ದು
Related Articles
Advertisement
ಬೆನ್ನುಹುರಿಯ ಉದ್ದ : 38 62 ಮಿ.ಮೀ
ಹೊಸದಿಲ್ಲಿ: ಗುಜರಾತ್‌ನ ಕಛ್ ನಲ್ಲಿ 2005ರಲ್ಲಿ ಪತ್ತೆಯಾಗಿದ್ದ, ಬೃಹತ್ ಮೊಸಳೆಯದ್ದು ಎಂದೇ ಈವರೆಗೂ ನಂಬಲಾಗಿದ್ದ ಪಳೆಯುಳಿಕೆಯೊಂದರ ಅಸಲಿಯತ್ತು ಈಗ ಬಯಲಾಗಿದೆ. ಈ ದೈತ್ಯ ಪಳೆಯುಳಿಕೆ ಭೂಮಿಯಲ್ಲಿ ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಅತೀದೊಡ್ಡ ಹಾವಿನದ್ದು ಎಂದು ಐಐಟಿ ರೂರ್ಕಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಹಲವಾರು ಜೀವಿಗಳಿಗೆ ವಿಶೇಷವಾಗಿ ಸಸ್ತನಿಗಳಿಗೆ ಭಾರತವೇ ಮೂಲವಾಗಿತ್ತು ಎಂಬ ವಾದಕ್ಕೆ ಈ ಪಳೆಯುಳಿಕೆ ಪುಷ್ಟಿ ನೀಡಿದೆ. ಇದು ಸುಮಾರು 15 ಮೀ. ಉದ್ದವಿದ್ದು, ಅನಕೊಂಡ ಮಾದರಿಯಲ್ಲಿ ನಿಧಾನವಾಗಿ ಚಲಿಸುವ ಹಾವಿರಬಹುದು ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಕೊಲಂಬಿಯಾದಲ್ಲಿ ಬದುಕಿತ್ತೆನ್ನಲಾದ ಟೈಟಾನೋಬೋ (43 ಅಡಿ ಉದ್ದದ ಹಾವು) ವಾಗಿಂತಲೂ ಉದ್ದನೆಯ ದೈತ್ಯ ಸರ್ಪ ಇದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಾಸುಕಿ ಎಂದು ನಾಮಕರಣ: ಕಛ್ ನ ಕಲ್ಲಿದ್ದಲು ಗಣಿಯಲ್ಲಿ ಪತ್ತೆಯಾಗಿರುವ ಈ ದೈತ್ಯ ಸರ್ಪ ಪ್ರಭೇದಕ್ಕೆ ವಿಜ್ಞಾನಿಗಳು “ವಾಸುಕಿ ಇಂಡಿಕಸ್’ ಎಂದು ನಾಮಕರಣ ಮಾಡಿದ್ದಾರೆ. ಭಾರತದಲ್ಲಿ ಪತ್ತೆಯಾಗಿರುವ ಕಾರಣ ಶಿವನ ಕೊರಳಲ್ಲಿರುವ, ಪುರಾಣದಲ್ಲಿ “ಸರ್ಪಗಳ ರಾಜ’ ಎಂದೇ ಕರೆಯಲ್ಪಡುವ “ವಾಸುಕಿ’ ಹೆಸರನ್ನು ಈ ಹಾವಿಗೆ ಇಡಲಾಗಿದೆ.