Advertisement

ಪ್ರಕೃತಿ ವಿಕೋಪ ಪರಿಹಾರಕ್ಕೆ 50 ಕೋ.ರೂ.ಬೇಡಿಕೆ: ಭಟ್‌

06:00 AM Jun 10, 2018 | Team Udayavani |

ಉಡುಪಿ ಜಿಲ್ಲೆ, ವಿಶೇಷವಾಗಿ ಉಡುಪಿ ನಗರ-ತಾಲೂಕಿನಲ್ಲಿ ಈ ಬಾರಿ ಮಳೆಯಿಂದಾಗಿ ಭಾರೀ ಪ್ರಮಾಣದ ಹಾನಿಯಾಗಿದೆ. ಪ್ರಾಕೃತಿಕ ವಿಕೋಪ ತಡೆ, ಎದುರಿಸುವಿಕೆ ಕುರಿತಂತೆ ಸ್ಥಳೀಯ ಶಾಸಕ ಕೆ.ರಘುಪತಿ ಭಟ್‌ ಮತ್ತು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರೊಂದಿಗೆ ಉದಯವಾಣಿ ಸಂದರ್ಶನ ನಡೆಸಿತು.  

Advertisement

ಪ್ರಾಕೃತಿಕ ವಿಕೋಪ ನಿರ್ವಹಣ ಕಾಮಗಾರಿ ಮತ್ತು ಪರಿಹಾರಕ್ಕೆ ನೀವು ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳೇನು?
         ಮಳೆಯಿಂದ ಈ ಬಾರಿ ಭಾರೀ ಅನಾಹುತವಾಗಿದೆ. ನಾವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 10 ಕೋ.ರೂ.ನಂತೆ ಇಡೀ ಜಿಲ್ಲೆಗೆ 50 ಕೋ.ರೂ. ಪರಿಹಾರ ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಪ್ರಾಯಃ ಜೂ. 15ರಂದು ಆರಂಭಗೊಳ್ಳುವ ವಿಧಾನಸಭೆ ಅಧಿವೇಶನದಲ್ಲೂ  ನಾವು ಇದಕ್ಕಾಗಿ ಒತ್ತಾಯಿಸಲಿದ್ದೇವೆ. 

ಮನೆ ಹಾನಿ ಹೊಂದಿದವರಿಗೆ ಎಷ್ಟು ಪರಿ ಹಾರ ಸಿಗುತ್ತದೆ? ನಿಮ್ಮ ಬೇಡಿಕೆ ಏನಿದೆ?
          ಮನೆ ಹಾನಿಗೊಂಡವರಿಗೆ ಈಗ 5,150 ರೂ. ಕೊಟ್ಟಿದ್ದಾರೆ. ಪೂರ್ಣ ಹಾನಿಗೊಂಡರೆ 95,000 ರೂ. ಸಿಗುತ್ತಿದೆ. ಇದು ಕೇಂದ್ರ ಸರಕಾರದ ನಿಯಮಾವಳಿ ಪ್ರಕಾರ ಸಿಗುತ್ತದೆ. ಇದು ಏನೇನೂ ಸಾಲದು. ನಾವೀಗ ಪೂರ್ಣ ಹಾನಿಗೊಂಡರೆ ಒಂದು ಮನೆಗೆ ತಲಾ 2 ಲ.ರೂ. ಕೊಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದೇವೆ. 

ಮಳೆ ಹಾನಿಗೆ ಸಂಬಂಧಿಸಿ ನೀವು ಕೈಗೊಂಡ ಪ್ರಯತ್ನಗಳೇನು?
          ನಿತ್ಯ ಮಳೆ ಹಾನಿಯಾದ ಸ್ಥಳಕ್ಕೆ ಭೇಟಿ ಕೊಡುತ್ತಿದ್ದೇನೆ. ಜೂ. 15ರ ವರೆಗೆ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹೊಸ ಟೆಂಡರ್‌ ಕರೆಯುವಂತಿಲ್ಲ. ಹೂಳೆತ್ತುವಿಕೆಗೂ ಟೆಂಡರ್‌ ಕರೆಯುವಂತಿಲ್ಲ. ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸುವಂತಿಲ್ಲ. ಆದರೂ ಕಾರ್ಮಿಕರನ್ನು ಬಳಸಿಕೊಂಡು ಶಿರಿಬೀಡು, ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಹೂಳು ತುಂಬಿದ್ದನ್ನು ತೆಗೆಸಲಾಗುತ್ತಿದೆ. ಜೂ. 15ರ ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಿ ಸಮರೋಪಾದಿ ಪ್ರಯತ್ನಗಳನ್ನು ನಡೆಸುತ್ತೇನೆ.
– ಶಾಸಕ ಕೆ.ರಘುಪತಿ ಭಟ್‌

ಮಳೆ ತರುವ ಅನಾಹುತಗಳನ್ನು ಎದುರಿಸಲು ನಗರಸಭೆ ಕೈಗೊಂಡ ಕ್ರಮಗಳೇನು?
       ನಾವು 3 ತಂಡಗಳನ್ನು ರಚಿಸಿ ದ್ದೇವೆ. ರಾತ್ರಿಯೂ ಒಂದು ತಂಡ ನಗರಸಭೆಯಲ್ಲಿರುತ್ತದೆ. ಮೂರು ಆರೋಗ್ಯಾಧಿಕಾರಿಗಳು, ಎಂಜಿನಿ ಯರ್‌ಗಳು ತಂಡದ ಮುಖ್ಯಸ್ಥ ರಾಗಿದ್ದಾರೆ. ಪೌರಕಾರ್ಮಿಕರೂ ತಂಡದಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ತಂಡ ತುರ್ತು ಕ್ರಮ ಕೈಗೊಳ್ಳುತ್ತದೆ. ತಂಡವು ರಸ್ತೆ ಮೇಲೆ ಬಿದ್ದ ಮರಗಳನ್ನು ಕಡಿಯುವುದು, ಅರಣ್ಯ ಇಲಾಖೆಗೆ ತಿಳಿಸುವುದು ಇತ್ಯಾದಿ ತುರ್ತು ಕೆಲಸಗಳನ್ನು ನಡೆಸುತ್ತದೆ. 

Advertisement

ಅಲ್ಲಲ್ಲಿ ತೆರೆದುಕೊಳ್ಳುವ ಒಳಚರಂಡಿ ಮ್ಯಾನ್‌ಹೋಲ್‌, ತೆರೆದ ಚರಂಡಿ ಹೂಳು ಇದಕ್ಕೆಲ್ಲ ಪರಿಹಾರ?
        ಮಳೆ ಬಂದಾಗ ಪ್ರತಿ ವರ್ಷ ಇಂತಹ ಸಮಸ್ಯೆಗಳು ಆಗುತ್ತವೆ. ಒಳಚರಂಡಿ ಕಾಮ ಗಾರಿ ಆದದ್ದು 1982ರಲ್ಲಿ. ಆಗ ಹಾಕಿದ ಕೊಳವೆ ಮಾರ್ಗಗಳು ಗಾತ್ರದಲ್ಲಿ ಚಿಕ್ಕದು. ಈಗ ನಮಗೆ ಒಮ್ಮೆಲೆ ಇದನ್ನು ಸರಿಪಡಿಸಲು ಆಗುವುದಿಲ್ಲ. ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುವಾಗ ನಾವು ದೊಡ್ಡ ಕೊಳವೆ ಅಳವಡಿಸಬೇಕೆನ್ನುತ್ತೇವೆ. ಆದರೂ ಹಿಂದಿದ್ದ ಸಣ್ಣ ಗಾತ್ರದ ಕೊಳವೆಗೂ, ಈಗ ಹಾಕುವ ದೊಡ್ಡ ಗಾತ್ರದ ಕೊಳವೆಗೂ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ. 

ನಾಗರಿಕ ಪ್ರಜ್ಞೆ ಕುರಿತು ನಿಮ್ಮ ಸಂದೇಶವೇನು?
        ಮೊನ್ನೆ ಗುಂಡಿಬೈಲಿಗೆ ಹೋದ ಸಂದರ್ಭ ತ್ಯಾಜ್ಯದಲ್ಲಿ ಬೇರೆ ಬೇರೆ ಸಂಗ್ರಹವಾದ ಡಾಲ್ಡಾ, ಎಣ್ಣೆ ಗಟ್ಟಿಯಾದದ್ದು ಕಂಡೆ. ಹೀಗೆ ಆಗುತ್ತದೆಂದು ನನಗೂ ಗೊತ್ತಿರಲಿಲ್ಲ. ಜನರು ಸರಿಯಾಗಿ ಸ್ಪಂದಿಸದೆ ಇದ್ದರೆ ನಗರಸಭೆ ಏನು ತಾನೆ ಮಾಡಲು ಸಾಧ್ಯ? ಮೊದಲು ಜನರಲ್ಲಿ ಜಾಗೃತಿ ಮೂಡಬೇಕು.
– ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ

ಪ್ರಾಕೃತಿಕ ವಿಕೋಪ- ನಿಯಂತ್ರಣ ಕೊಠಡಿ 
ಟೋಲ್‌ ಫ್ರೀ ಸಂಖ್ಯೆ- 1077
ನಗರಸಭೆ- 2520306
ಜಿಲ್ಲಾಧಿಕಾರಿ ಕಚೇರಿ- 0820-2574802
ಪೊಲೀಸ್‌ ಇಲಾಖೆ- 2526444
ಜಿ.ಪಂ.-2574945
ಆರೋಗ್ಯ ಇಲಾಖೆ-2536650
ಮೆಸ್ಕಾಂ ಇಲಾಖೆ-2521201
ಶಿಕ್ಷಣ ಇಲಾಖೆ- 2574970
ತಾಲೂಕು ಕಚೇರಿ ಉಡುಪಿ- 2520417
ತಾಲೂಕು ಕಚೇರಿ ಬ್ರಹ್ಮಾವರ- 2560494
ತಾಲೂಕು ಕಚೇರಿ ಕಾಪು-2591444
ಮೀನುಗಾರಿಕೆ ಇಲಾಖೆ 2537044
ಉಡುಪಿ ತಾ.ಪಂ.-2520447
ಸಾಲಿಗ್ರಾಮ ಪಟ್ಟಣ ಪಂ.-2564229 

Advertisement

Udayavani is now on Telegram. Click here to join our channel and stay updated with the latest news.

Next