ನೋಯ್ಡಾ: ಅನೇಕರು ಸ್ಫೂರ್ತಿದಾಯಕವೆಂದು ಕಂಡುಕೊಳ್ಳಬಹುದಾದ, ನಂಬಲಸಾಧ್ಯವಾದ ಕಥೆಯಲ್ಲಿ, ನೋಯ್ಡಾದ ಸೆಕ್ಟರ್ 121 ರ 5 ವರ್ಷದ ಬಾಲಕಿ ತನ್ನ ಅಂಗಗಳನ್ನು ದಾನ ಮಾಡಿ ಇಬ್ಬರು ರೋಗಿಗಳ ಜೀವಗಳನ್ನು ಉಳಿಸಿದ್ದಾಳೆ.
ಏಪ್ರಿಲ್ 27 ರಂದು ನೊಯ್ಡಾದ ತನ್ನ ಮನೆಯ ಹೊರಗೆ ರೋಲಿ ಎಂಬ ಬಾಲಕಿಯ ತಲೆಗೆ ಗುಂಡು ಹಾರಿಸಲಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ತಲೆಯ ಎರಡು ಮೂಳೆಗಳು ಮುರಿದ ಸ್ಥಿತಿಯಲ್ಲಿ ಕಂಡುಬಂದಿವೆ ಎಂದಿದ್ದು ಗಾಯದಿಂದಾಗಿ ರೋಲಿ ಕೋಮಾಗೆ ಹೋಗಿದ್ದರು.
ನಂತರ ರೋಲಿಯನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಲಾಯಿತು. ಎರಡು ದಿನಗಳ ಕಾಲ ಬಾಲಕಿಯನ್ನು ಉಳಿಸಿಕೊಳ್ಳಲು ವೈದ್ಯರು ಪ್ರಯತ್ನಿಸಿದರಾದರೂ ಶುಕ್ರವಾರ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು.
, ಸಂಕಷ್ಟಮಯ ಆರ್ಥಿಕ ಹಿನ್ನೆಲೆ ಹೊಂದಿರುವ ರೋಲಿಯ ಪೋಷಕರಿಗೆ ಅಂಗಾಂಗ ದಾನದ ಪ್ರಕ್ರಿಯೆಯ ಬಗ್ಗೆ ವಿವರಿಸಲಾಗಿದೆ. ಪೋಷಕರು ಆರಂಭದಲ್ಲಿ ನಿರಾಕರಿಸಿದರು, ಆದರೆ ನಂತರ ತಮ್ಮ ಮಗಳ ಅಂಗಾಂಗಗಳ ದಾನಕ್ಕೆ ಒಪ್ಪಿಕೊಂಡರು ಎಂದು ಹಿರಿಯ ಏಮ್ಸ್ ನರಶಸ್ತ್ರಚಿಕಿತ್ಸಕ ಡಾ.ದೀಪಕ್ ಗುಪ್ತಾ ಹೇಳಿದ್ದಾರೆ.
ತಮ್ಮ ಮಗುವನ್ನು ಕಳೆದುಕೊಂಡ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು ಎಂದು ಅಂಗಾಂಗ ದಾನಕ್ಕೆ ಮುಂದಾಗಿದ್ದೇವೆ ಎಂದು ರೋಲಿಯ ತಂದೆ ಹರಿನಾರಾಯಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೋಲಿಯ ಅಂಗಾಂಗ ದಾನದಿಂದಾಗಿ ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಹೊಸ ಬದುಕು ಕಟ್ಟಿಕೊಂಡಿದ್ದಾರೆ.