Advertisement

18ಗಂಟೆ ರಕ್ಷಣಾ ಕಾರ್ಯ; 50ಅಡಿ ಆಳದ ಕೊಳವೆ ಬಾವಿಗೆ ಬಿದ್ದ 5 ವರ್ಷದ ಮಗು ಸಾವು

09:45 AM Nov 05, 2019 | Team Udayavani |

ಚಂಡೀಗಢ್: ಹರ್ಯಾಣದ ಕರ್ನಾಲ್ ಜಿಲ್ಲೆಯ ಹರ್ಷಿಂಗಾಪುರಾ ಗ್ರಾಮದಲ್ಲಿ 50 ಅಡಿ ಆಳದ ತೆರೆದ ಬೋರ್ ವೆಲ್ ಗೆ ಬಿದ್ದಿದ್ದ 5 ವರ್ಷದ ಬಾಲಕಿಯನ್ನು ರಕ್ಷಿಸಲು ಸುಮಾರು 18 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ವಿಫಲವಾಗಿದ್ದು, ಬಾಲಕಿಯ ಮೃತದೇಹವನ್ನು ಸೋಮವಾರ ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭಾನುವಾರ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಬಾಲಕಿ ಬೋರ್ ವೆಲ್ ಹೊಂಡದೊಳಕ್ಕೆ ಬಿದ್ದಿದ್ದಳು. ಸುಮಾರು 18ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೋಮವಾರ ಬಾಲಕಿಯ ದೇಹವನ್ನು ಹೊರತೆಗೆಯಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಬಾಲಕಿ ಮೃತಪಟ್ಟಿರುವುದಾಗಿ ಕರ್ನಾಲ್ ಸಿವಿಲ್ ಆಸ್ಪತ್ರೆಯ ವೈದ್ಯರು ಘೋಷಿಸಿರುವುದಾಗಿ ಪೊಲೀಸ್ ಠಾಣಾಧಿಕಾರಿ ಸಚಿನ್ ತಿಳಿಸಿದ್ದಾರೆ.

ತಮ್ಮ ಮಗಳು ಆಟವಾಡುತ್ತಿದ್ದಾಗ ಕಾಣೆಯಾಗಿರುವುದಾಗಿ ಹುಡುಕಾಟ ನಡೆಸುತ್ತಿದ್ದ ಮನೆಯವರಿಗೆ ಕೊನೆಗೆ ಬೋರ್ ವೆಲ್ ಗೆ ಬಿದ್ದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನಂತರ ಜಿಲ್ಲಾಡಳಿತ, ಪೊಲೀಸ್ ಹಾಗೂ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿತ್ತು. ತದನಂತರ ಎನ್ ಡಿಆರ್ ಎಫ್ ಗೆ ಮಾಹಿತಿ ನೀಡಿದ್ದರು.

ಬೋರ್ ವೆಲ್ ಒಳಗೆ ಆಕ್ಸಿಜನ್ ಸರಬರಾಜು ಮಾಡಿ, ಕ್ಯಾಮರಾ ಉಪಯೋಗಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದರು. ಆದರೆ ಕೊನೆಗೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next