Advertisement

ಟೀನೇಜರ್‌ ಕುರಿತ 5 ತಪ್ಪು ಕಲ್ಪನೆಗಳು

09:54 AM Oct 24, 2017 | Team Udayavani |

ಹುಚ್ಚು ಕೋಡಿ ಮನಸ್ಸು ಅದು 16ರ ವಯಸ್ಸು ಎಂದು ಕವಿಗಳು ಹಾಡಿದ್ದಾರಲ್ಲ, ಅದೇ ರೀತಿ ಅವರ ಕುರಿತು ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಅವುಗಳಲ್ಲಿ ಐದು ಇಲ್ಲಿವೆ…

Advertisement

ಜಗತ್ತಿನ ಎಲ್ಲಾ ಟೀನೇಜರ್‌ಗಳೂ ಒಂದೇ!
ಸಾಮಾನ್ಯವಾಗಿ ಟೀನೇಜರ್‌ಗಳು ಒಂದೇ ತೆರನಾದ ವ್ಯಕ್ತಿತ್ವವನ್ನು ಹೊಂದಿರುತ್ತರಾದರೂ ಅವರ ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಭಾರತದಲ್ಲಿರುವ ಟೀನೇಜರ್‌ಗಳು ಓದು, ಶಾಲೆ, ಕೆಲಸ ಅಂತ ಬಿಝಿಯಾಗಿದ್ದರೆ, ಇನ್ನು ಕೆಲ ರಾಷ್ಟ್ರಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿಯನ್ನು ಹೊತ್ತಿರಬಹುದು.

ಅವರಿಗೆ ಜವಾಬ್ದಾರಿ ಇಲ್ಲ
ಇದೊಂದು ತುಂಬಾ ಸಾಮಾನ್ಯವಾಗಿ ಕೇಳಿ ಬರುವ ಆರೋಪ. ಇದರಲ್ಲಿ ಅವರದ್ದು ಯಾವ ತಪ್ಪೂ ಇಲ್ಲ. ಅವರು ತಮ್ಮ ಸುತ್ತಲಿನ ಸಮಾಜದಲ್ಲಿ ನಿರ್ವಹಿಸಬೇಕಾಗಿರುವ ಪಾತ್ರದ ಮೇಲೆ ಈ ಅಂಶ ನಿರ್ಧರಿತವಾಗಿರುತ್ತೆ. ಮನೆಯವರು ತಮ್ಮ ಮೇಲೆ ಅವಲಂಬಿತವಾಗಿದ್ದರೆ, ಹೊಣೆಯನ್ನು ಹೊತ್ತಿದ್ದರೆ ಅವರು ಚಿಕ್ಕವರಾಗಿದ್ದರೂ ಯಾವತ್ತೂ ಜವಾಬ್ದಾರಿಯಿಂದಾಚೆ ಯೋಚಿಸುವುದಿಲ್ಲ. ಅದೇ ಫ್ರೀಯಾಗಿ, ಯಾವುದೇ ಚಿಂತೆಗಳಿಲ್ಲದವರು ಜವಾಬ್ದಾರಿ ಇಲ್ಲದಂತೆ ವರ್ತಿಸಬಹುದಷ್ಟೆ. ಹಾಗೆಂದು ವಯಸ್ಸಿಗೂ ಜವಾಬ್ದಾರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ.

ಅದೊಂದು ಹಂತ ಅಷ್ಟೇ
ಹದಿಹರೆಯದವರು ಏನಾದರೂ ತಪ್ಪು ಎಸಗಿದಾಗ ‘ಅದೊಂದು ಸ್ಟೇಜ್‌’ ಎಂದು ತಿಪ್ಪೆ ಸಾರಿಸುವುದಕ್ಕೆ ಮುಂದಾಗುತ್ತಾರೆ.  ಇದು ಇಂದು ನೆನ್ನೆಯ ಕಥೆಯಲ್ಲ, ಶೇಕ್ಸ್‌ಪಿಯರ್‌ ಕಾಲದ ಕಥೆ. ಖ್ಯಾತ ನಾಟಕಕಾರ ತನ್ನ ನಾಟಕವೊಂದರಲ್ಲಿ ಮನುಷ್ಯ ಜೀವನವನ್ನು ಏಳು ವಿಭಾಗಗಳಾಗಿ ಚಿತ್ರಿಸಿದ್ದ. ಅದೇ ಮುಂದೆ ನಾನಾ ರೂಪಾಂತರಗಳಿಗೆ ಒಳಗಾಗಿ ನಮ್ಮ ನಡುವೆ ಇನ್ನೂ ಉಳಿದುಕೊಂಡಿದೆ. 

ಅವರು ಸ್ವಾರ್ಥಿಗಳು
ಎಲ್ಲಾ ವಯೋಮಾನದ ಮನುಷ್ಯರಂತೆ ಅವರೂ ಕೂಡಾ. ಅದರಲ್ಲಿ ಹೆಚ್ಚು ಕಡಿಮೆಯೇನಿಲ್ಲ. ಆದರೆ ಸ್ವಾರ್ಥಿಯೆಂಬ ಹಣೆಪಟ್ಟಿಯನ್ನು ಅವರಿಗೆ ಮಾತ್ರ ಹಚ್ಚುವುದು ಸರಿಯಲ್ಲ. 

Advertisement

ತಂತ್ರಜ್ಞಾನ ಅಡಿಕ್ಟ್ಗಳು
ಯಾವುದೇ ಹೊಸ ಸಾಫ್ಟ್ವೇರ್‌, ಆ್ಯಪ್‌, ಗೇಮ್‌ಗಳಾಗಲಿ ಅವೆಲ್ಲವೂ ಹದಿಹರೆಯದವರನ್ನು ಗಮನದಲ್ಲಿರಿಸಿಕೊಂಡು ತಯಾರಾಗಿರುತ್ತದೆ. ಹೀಗಾಗಿ ಅವನ್ನು ಹೆಚ್ಚು ಬಳಸುವವರೂ ಹದಿಹರೆಯದವರೇ ಎಂಬ ತಪ್ಪು ಕಲ್ಪನೆಯಿದೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಅವರು ತಂತ್ರಜ್ಞಾನ, ಗ್ಯಾಜೆಟ್‌ಗಳಿಗಿಂತ ತಮ್ಮ ಸುತ್ತಮುತ್ತಲಿನ ಸ್ನೇಹಿತರು, ವ್ಯಕ್ತಿಗಳೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.

ಟೀನ್‌ ಅನ್ನೋ ಪದ ಮೊದಲು ಚಾಲ್ತಿಗೆ ಬಂದಿದ್ದು 1899ರಲ್ಲಿ. ಆ ಸಮಯದಲ್ಲಿ ‘ಟೀನೇಜರ್‌’ ಎಂಬ ಪದ ಪ್ರಯೋಗದಲ್ಲಿರಲಿಲ್ಲ. 1950ರ ಈಚೆಗೆ ಆ ಪದ ಬಳಕೆ ಬಂದಿತು. 

Advertisement

Udayavani is now on Telegram. Click here to join our channel and stay updated with the latest news.

Next