Advertisement
ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರ ಜತೆಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ 26 ಸಾವಿರ ದಿಂದ 31 ಸಾವಿರ ರೂ.ವರೆಗೆ ಇದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಪ್ರಯೋ ಜನ ಸಮಾನವಾಗಿ ದೊರಕಲಿದೆ. ರಾಜ್ಯದ ಬೊಕ್ಕಸಕ್ಕೆ ಇದರಿಂದ ವಾರ್ಷಿಕ 55 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವವರಿಗೆ ಭದ್ರತ ಇಡಗಂಟು ನೀಡಲು ನಿರ್ಧರಿಸಲಾಗಿದೆ. ವಾರ್ಷಿಕ 50 ಸಾವಿರ ರೂ.ಗಳಂತೆ ಲೆಕ್ಕಹಾಕಿ 5 ಲಕ್ಷ ರೂ. ಧನಸಹಾಯ ನೀಡಲಾಗುವುದು. ಇದಕ್ಕಾಗಿ 72 ಕೋಟಿ ರೂ. ಕಾಯ್ದಿರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಪ್ರ.ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಖಾಯಂ ಸಿಬಂದಿ ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಗೌರವಕ್ಕೆ ಚ್ಯುತಿ ಬರದಂತೆ ವರ್ತಿಸಬೇಕು. ಕೌನ್ಸೆಲಿಂಗ್ ಮೂಲಕ ಆಯ್ಕೆಯಾದವರಿಗೆ ಕೆಲಸದ ಅವಧಿ ಕಡಿಮೆಯ ಕಾರಣ ವಜಾ ಮಾಡುವಂತಿಲ್ಲ. 10 ತಿಂಗಳು ಗೌರವಧನ ಕಡ್ಡಾಯ. ಪ್ರತೀ ತಿಂಗಳು ಒಂದು ವೇತನ ಸಹಿತ ರಜೆ ನೀಡಲು ಸಮ್ಮತಿಸಲಾಗಿದೆ. ಒಮ್ಮೆ ದಾಖಲೆ ಸಲ್ಲಿಸಿದವರು ಪ್ರತೀ ವರ್ಷ ಸಲ್ಲಿಸುವ ಅಗತ್ಯವಿಲ್ಲ. ಅದಕ್ಕೆ ಹೊಸ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
Related Articles
ಪ್ರಸ್ತುತ ಅನುಭವ ಆಧರಿಸಿ ಅತಿಥಿ ಉಪನ್ಯಾಸಕರಿಗೆ 26ರಿಂದ 31 ಸಾವಿರ ರೂ.ವರೆಗೆ ವೇತನ.
ಈಗ 5 ಸಾವಿರ ರೂ. ಏರಿಕೆ. 10,600 ಅತಿಥಿ ಉಪನ್ಯಾಸಕರಿಗೆ ಲಾಭ. ಸರಕಾರಕ್ಕೆ ವಾರ್ಷಿಕ 55 ಕೋಟಿ ರೂ. ಹೆಚ್ಚುವರಿ ಹೊರೆ.
60 ವರ್ಷಕ್ಕೆ ನಿವೃತ್ತರಾಗುವವರಿಗೆ ಭದ್ರತ ಇಡುಗಂಟು. ತಲಾ 5 ಲಕ್ಷ ರೂ. ನೆರವು, ಸರಕಾರಕ್ಕೆ ಹೆಚ್ಚುವರಿ 72 ಕೋಟಿ ರೂ. ನೀಡುವ ಒತ್ತಡ.
ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಉಚಿತ ವಿಮೆ.
Advertisement