Advertisement

ಕೋವಿಡ್ ಲಸಿಕೆ ವಿತರಣೆಗೆ 5 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸೌಲಭ್ಯ ಇಲ್ಲ!

06:15 PM Apr 20, 2021 | Team Udayavani |

ನವದೆಹಲಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಮೂರನೇ ಹಂತದ ಅಭಿಯಾನಕ್ಕೆ ಕೆಲವು ದಿನಗಳು ಬಾಕಿ ಇದ್ದು, ಈ ಲಸಿಕೆ ವಿತರಣೆಗೆ ಹೆಚ್ಚಾಗಿ ಖಾಸಗಿ ವ್ಯವಸ್ಥೆಯನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಸರ್ಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಎಲ್ಲಾ ಸಣ್ಣ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಸರ್ಕಾರಿ ವ್ಯವಸ್ಥೆ ಮೇಲೆ ಅವಲಂಬಿತವಾಗಿ ಎಂದು ತಿಳಿಸಿದೆ.

Advertisement

ಇದನ್ನೂ ಓದಿ:ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

ಕೇಂದ್ರ ಸರ್ಕಾರದ ಕೋವಿನ್ ಪೋರ್ಟಲ್ ಮಾಹಿತಿ ಪ್ರಕಾರ, 13 ಸಣ್ಣ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ನೀಡಲು ಹತ್ತಕ್ಕಿಂತಲೂ ಕಡಿಮೆ ಖಾಸಗಿ ಸೌಲಭ್ಯವಿದೆ. ಅಲ್ಲದೇ ಐದು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಲಸಿಕೆ ವಿತರಣೆಗೆ ಯಾವುದೇ ಖಾಸಗಿ ಸೌಲಭ್ಯಗಳಿಲ್ಲ.

ಹತ್ತಕ್ಕಿಂತ ಕಡಿಮೆ ಖಾಸಗಿ ಸೌಲಭ್ಯವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೆಂದರೆ, ಅಂಡಮಾನ್ ಮತ್ತು ನಿಕೋಬಾರ್ , ಅರುಣಾಚಲ ಪ್ರದೇಶ, ದಾಮನ್ ಮತ್ತು ದಿಯು, ಲಡಾಖ್, ಲಕ್ಷದ್ವೀಪದಲ್ಲಿ ಯಾವುದೇ ಖಾಸಗಿ ಸೌಲಭ್ಯ ಇಲ್ಲ. ದಾದ್ರ ಮತ್ತು ನಗರ್ ಹವೇಲಿಯಲ್ಲಿ 2 ಖಾಸಗಿ ಸೌಲಭ್ಯ, ಮಣಿಪುರದಲ್ಲಿ 3, ಮೇಘಾಲಯ 7, ನಾಗಲ್ಯಾಂಡ್ 4, ಪುದುಚೆರಿ 7, ಸಿಕ್ಕಿಂ 1, ತ್ರಿಪುರಾ 1 ಮತ್ತು ಮಿಜೋರಾಂನಲ್ಲಿ 1 ಖಾಸಗಿ ಸೌಲಭ್ಯದ ವ್ಯವಸ್ಥೆ ಇದೆ ಎಂದು ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಸಲು ಯಾವುದೇ ಖಾಸಗಿ ಸೌಲಭ್ಯ ಇಲ್ಲ ಎಂಬುದಾಗಿ ಈ ಮೊದಲು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಕುತೂಹಲಕಾರಿ ವಿಷಯವೇನೆಂದರೆ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಗೆ 1110ಕ್ಕೂ ಅಧಿಕ ಖಾಸಗಿ ಸೌಲಭ್ಯ ಹೊಂದಿರುವ ಒಂದೇ ಒಂದು ರಾಜ್ಯವೆಂದರೆ ಅದು ತಮಿಳುನಾಡು.

Advertisement

ದೆಹಲಿ, ಕೇರಳ ಮತ್ತು ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿದೆ. ಆದರೆ ಕೋವಿಡ್ ಲಸಿಕೆ ವಿತರಿಸಲು ದೆಹಲಿಯಲ್ಲಿ 817, ಕೇರಳದಲ್ಲಿ 230 ಹಾಗೂ ಉತ್ತರಪ್ರದೇಶದಲ್ಲಿ 1,101 ಖಾಸಗಿ ಸೌಲಭ್ಯ ಹೊಂದಿದೆ ಎಂದು ಪಿಟಿಐ ವರದಿ ತಿಳಿಸಿದೆ. 3ನೇ ಹಂತದ ಕೋವಿಡ್ ಲಸಿಕೆ ವಿತರಣೆಯಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೇಂದ್ರ ಸರಕಾರ ಅವಕಾಶ ನೀಡಿರುವುದರಿಂದ ಈ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಪಾಲು ಮಹತ್ತರವಾದದ್ದಾಗಿದೆ ಎಂದು ವರದಿ ವಿವರಿಸಿದೆ. ಮೇ 1ರಿಂದ 18 ವರ್ಷದ ಮೇಲಿನ ಎಲ್ಲರಿಗೂ ಲಸಿಕೆ ಪಡೆಯುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next