ನವದೆಹಲಿ : ಕೋವಿಡ್ ಎರಡನೇ ಹಾವಳಿ ವ್ಯಾಪಕವಾಗಿ ಮಿತಿಮೀರುತ್ತಿರುವ ಹೊತ್ತಿನಲ್ಲೇ ಕೇಂದ್ರ ಚುನಾವಣಾ ಆಯೋಗ ಪುದುಚೇರಿ ಕೇಂದ್ರಾಡಳಿತ ಪ್ರದೇಶ ಸೇರಿ ಪಶ್ಚಿಮಬಂಗಾಳ, ಅಸ್ಸಾಂ, ತಮಿಳುನಾಡು ಹಾಗೂ ಕೇರಳ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಹಾಗಾದ್ರೆ ಈ ಐದು ರಾಜ್ಯಗಳಲ್ಲಿ ಗೆಲುವು ಸಾಧಿಸಲು ಎಷ್ಟು ಮತಗಳು ಬೇಕು ಎಂಬುದನ್ನು ಇಲ್ಲಿ ನೋಡೋಣ. ಈ ಐದು ರಾಜ್ಯಗಳ ಮ್ಯಾಜಿಕ್ ನಂಬರ್ ಈ ಕೆಳಗಿನಂತಿದೆ.
ಪಶ್ಚಿಮ ಬಂಗಾಳ : ಇಲ್ಲಿ ಒಟ್ಟು 294 ಮತ ಕ್ಷೇತ್ರಗಳು ಇದ್ದು, ಈ ರಾಜ್ಯದಲ್ಲಿ ಗೆಲುವು ಸಾಧಿಸಬೇಕಾದರೆ 148 ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕಾಗುತ್ತದೆ.
ಅಸ್ಸಾಂ : ಈ ರಾಜ್ಯದಲ್ಲಿ ಒಟ್ಟು 126 ಕ್ಷೇತ್ರಗಳಲ್ಲಿ ಚುನಾಚವಣೆ ನಡೆದಿದ್ದು, 64 ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೋ ಅವರು ಅಧಿಕಾರದ ಗದ್ದುಗೆ ಏರುತ್ತಾರೆ.
ತಮಿಳುನಾಡು : ತಮಿಳುನಾಡಿನಲ್ಲಿ ವಿಜಯಮಾಲೆಯನ್ನು ಹಾಕಿಕೊಳ್ಳಬೇಕಾದರೆ 118 ಕ್ಷೇತ್ರಗಳಲ್ಲಿ ಜಯ ಗಳಿಸಬೇಕಾಗುತ್ತದೆ. ಇಲ್ಲಿ ಒಟ್ಟು 234 ಕ್ಷೇತ್ರಗಳಿವೆ.
ಕೇರಳ : ಕೇರಳದಲ್ಲಿ ಒಟ್ಟು 140 ಮತ ಕ್ಷೇತ್ರಗಳನ್ನು ಹೊಂದಿದ್ದು 71 ಕ್ಷೇತ್ರಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತದೋ ಆ ಪಕ್ಷ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುತ್ತದೆ.
ಪುದುಚರಿ : ಇನ್ನು ಚಿಕ್ಕ ರಾಜ್ಯವಾದ ಪುದುಚೆರಿಯಲ್ಲಿ 33 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.