Advertisement
ನಗರದ ವಿವಿಧೆಡೆ ವಾಯುಗುಣ ಮಟ್ಟದ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಿಂದ ಐದು ಕಡೆಗಳಲ್ಲಿ ಮಾಪನ ಯಂತ್ರ ಅಳವಡಿಸ ಲಾಗಿದೆ. ಯಂತ್ರದಲ್ಲಿ ದಾಖಲಾಗುವ ಮಾಹಿತಿಗಳು ಸ್ಮಾರ್ಟ್‌ಸಿಟಿಯ “ಕಮಾಂಡ್ ಕಂಟ್ರೋಲ್ ಸೆಂಟರ್’ನಲ್ಲಿ ಅಪ್‌ಡೇಟ್ ಆಗಿರುತ್ತದೆ. ಅಲ್ಲಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೂ ಲಭಿಸುತ್ತದೆ. ಜತೆಗೆ ರಾಜ್ಯದ ಸ್ಮಾರ್ಟ್‌ಸಿಟಿ ಕೇಂದ್ರ ಕಚೇರಿಗೂ ಸಲ್ಲಿಕೆಯಾಗುತ್ತದೆ. ಈ ಮೂಲಕ ನಗರದ ವಾಯು ಗುಣಮಟ್ಟವನ್ನು ನಿತ್ಯ ಪರಿಶೀಲಿಸಲಾಗುತ್ತಿದೆ.
ಸದ್ಯ ಸರಕಾರಿ ವ್ಯವಸ್ಥೆಯೊಳಗೆ ಮಾತ್ರ ವಾಯುಗುಣಮಟ್ಟದ ವಿವರ ದೊರೆಯು ತ್ತಿದೆ. ಆದರೆ ಇನ್ನು ಮುಂದೆ ಸಾರ್ವಜನಿಕ ರಿಗೂ ಈ ಮಾಹಿತಿ ಮೊಬೈಲ್‌ನಲ್ಲಿ ದೊರೆ ಯಲಿದೆ. ಸ್ಮಾರ್ಟ್‌ಸಿಟಿಯಿಂದ ಜಾರಿಗೆ ತರಲಾಗುತ್ತಿರುವ “ಒನ್ ಟಚ್’ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ಕೂಡ ಮಾಹಿತಿ ಪಡೆದುಕೊಳ್ಳಬಹುದು.
ತಿಂಗಳ ಹಿಂದೆ ನಗರದ ಹೊರವಲಯದ ಕೆಲವು ಭಾಗಗಳಲ್ಲಿ ಧೂಳು ಮಿಶ್ರಿತ ವಾತಾ ವರಣ ಕಂಡು ಬಂದಿತ್ತು. ಸುಮಾರು ಒಂದು ವಾರದವರೆಗೆ ಹೀಗೆ ಇತ್ತು. ಬಳಿಕ ಮಳೆ ಸುರಿದು ವಾತಾವರಣ ಶುಭ್ರವಾಗಿದೆ. ಕಳೆದ ವರ್ಷವೂ ಇದೇ ಅವಧಿ ಯಲ್ಲಿ ಧೂಳುಮಯ ವಾತಾವರಣ ವಿತ್ತು. ನಗರ ವ್ಯಾಪ್ತಿಯಲ್ಲಿ ಹಸಿರು ಪರಿಸರ ಇರುವುದರಿಂದ ಆತಂಕ ಪಡ ಬೇಕಾಗಿಲ್ಲ. ಅವಕಾಶ ಇರುವಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ವಾತಾವರಣವನ್ನೂ ಮತ್ತಷ್ಟು ಶುಭ್ರವಾಗಿಟ್ಟು ಕೊಳ್ಳಬಹುದು ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.
Related Articles
1.ಲಾಲ್‌ಬಾಗ್‌ನ ಪಾಲಿಕೆ ಕಟ್ಟಡ
2. ಪುರಭವನ
3. ಅಂಬೇಡ್ಕರ್ ವೃತ್ತದ ಬಳಿ
4. ಬೋಳಾರ ಬಿಇಒ ಕಚೇರಿ
5. ಬಂದರ್‌ನ ಕ್ರೆಸೆಂಟ್ ಶಾಲೆ ಬಳಿ
Advertisement
ವಾಯುಗುಣಮಟ್ಟದ ನಿಖರ ಮಾಹಿತಿನಗರ ವ್ಯಾಪ್ತಿಯಲ್ಲಿ ಐದು ಪ್ರದೇಶದಲ್ಲಿ ವಾಯುಗುಣಮಟ್ಟ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಪ್ರತೀ ಕ್ಷಣದ ವಾಯು ಗುಣಮಟ್ಟದ ಮಾಹಿತಿ ಇದರ ಮೂಲಕ ದೊರೆಯುತ್ತದೆ. ನಿಖರ ಮಾಹಿತಿಯನ್ನು ಇದರ ಮೂಲಕ ಪಡೆಯುತ್ತಿದ್ದೇವೆ. ಒನ್‌ಟಚ್ ಆ್ಯಪ್ ಮೂಲಕ ಸಾರ್ವಜನಿಕರಿಗೂ ಇದರ ಮಾಹಿತಿ ಮೊಬೈಲ್‌ನಲ್ಲೇ ದೊರೆಯಲಿದೆ.
-ಅರುಣ್ ಪ್ರಭಾ ಕೆ.ಎಸ್.,ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ-ಮಂಗಳೂರು – ದಿನೇಶ್ ಇರಾ