Advertisement
ಏಕೆಂದರೆ, ಪಟ್ಟಣದಲ್ಲಿ 5 ರೂ. ಪಡೆದು ಚಿಕಿತ್ಸೆ ನೀಡುವ ವೈದ್ಯರಿದ್ದಾರೆ. ಅವರ ಹೆಸರು ಡಾ. ರಾಮಕೃಷ್ಣಯ್ಯ. 37 ವರ್ಷದಿಂದ ಅತಿ ಕಡಿಮೆ ಫೀ ಪಡೆದು ಚಿಕಿತ್ಸೆ ನೀಡುತ್ತಿರುವ ಅಪರೂಪ ವೈದ್ಯರಿವರು. ಈ ಹಿಂದೆ ಇವರು 2ರೂ. ಪಡೆಯುತ್ತಿದ್ದರು. ಈಗ 5 ರೂ.ಗೆ ಹೆಚ್ಚಿಸಿದ್ದಾರೆ.
ಆಗ 2 ರೂಗೆ ಒಬ್ಬ ರೋಗಿಗೆ ಚಿಕಿತ್ಸೆ ನೀಡಿ, ಔಷಧಿಕೊಟ್ಟು ಗುಣಪಡಿಸಲಾಗುತ್ತಿತ್ತು. ಈಗಲೂ ಅದೇ ತತ್ವವನ್ನು ಮುಂದುವರಿಸುತ್ತಿದ್ದಾರೆ. ಎಲ್ಲ ಕಡೆ ವೈದ್ಯರ ಪರೀûಾ ಶುಲ್ಕವೇ 150-200 ರೂ. ದಾಟಿರುವಾಗ ರಾಮಕೃಷ್ಣಯ್ಯ ಕೇವಲ ಮೂರು ರೂ. ಮಾತ್ರ ಹೆಚ್ಚಿಸಿದ್ದಾರೆ. ಆದರೆ, ರೋಗಿಗಳನ್ನು ನೋಡುವ ಮುತುವರ್ಜಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೀಗಾಗಿಯೇ, ಪಟ್ಟಣದಲ್ಲಿ ರಾಮಕೃಷ್ಣಯ್ಯನವರು ಐದು ರೂ. ಡಾಕ್ಟರ್ ಅಂತಲೇ ಮನೆ ಮಾತಾಗಿದ್ದಾರೆ.
Related Articles
ಕೆಲವು ಬಡ ರೋಗಿಗಳು ಕಣ್ಣೀರಿಡುತ್ತಾ ಬರುತ್ತಾರೆ. ಅಂಥವರಿಂದ ರಾಮಕೃಷ್ಣಯ್ಯನವರು ಹಣ ಪಡೆಯುವುದಿಲ್ಲ. ಸಂಘಸಂಸ್ಥೆಗಳು ಬಡವರಿಗಾಗಿ ಏರ್ಪಡಿಸುವ ಆರೋಗ್ಯ ಶಿಬಿರಗಳಲ್ಲೂ ಈ ಡಾಕ್ಟರ್ ಉತ್ಸಾಹದಿಂದ ಪಾಲ್ಗೊಂಡು ಉಚಿತ ಚಿಕಿತ್ಸೆ ನೀಡುತ್ತಾರೆ. ಈ ತನಕ ಲಕ್ಷಾಂತರ ಮಂದಿಗೆ ಚಿಕಿತ್ಸೆ ನೀಡಿರುವ ರಾಮಕೃಷ್ಣಯ್ಯನವರಿಗೆ ಈ ವೃತ್ತಿಯ ಬಗ್ಗೆ ವಿಶೇಷ ಅಭಿಮಾನವಿದೆ. ಗ್ರಾಮೀಣ ಪ್ರದೇಶದ ರೋಗಿಗಳಿಗೆ ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಲು ಹಣ ಎಲ್ಲಿಂದ ಬರಬೇಕು? ಸಣ್ಣ ಗ್ರಾಮದಲ್ಲಿ ಒಬ್ಬ ರೈತನ ಮಗನಾಗಿ ಹುಟ್ಟಿ ಬೆಳೆದು ನಾನು ವೃತ್ತಿ ಜೀವನ ಆರಂಭಿಸುವಾಗ ಇಲ್ಲಿನ ಜನರ ಸ್ಥಿತಿ, ಹಣ ಕಾಸಿನ ತೊಂದರೆ ಇವೆಲ್ಲವನ್ನೂ ನೋಡಿದ್ದೇನೆ. ಈಗಲೂ ಪರಿಸ್ಥಿತಿ ಏನೂ ಬದಲಾಗಿಲ್ಲ.
ನಮ್ಮ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಅವರ ಯೋಗಕ್ಷೇಮದ ಬಗ್ಗೆ ಹೆಚ್ಚು ಕೇರ್ ತಗೋಬೇಕು ಎಂಬ ಆಸೆ-ಕನಸು ನನಗಿತ್ತು. ಅದನ್ನು ನನಸು ಮಾಡಿಕೊಂಡಿದೀನಿ. ಸ್ವಲ್ಪ ಮನದಲ್ಲಿ ಆಳವಾಗಿ ಬೇರೂರಿತ್ತು. ನಮ್ಮ ಗ್ರಾಮ ಸುತ್ತಲಮುತ್ತಲ ಗ್ರಾಮದ ಜನರ ಈ ಸೇವೆಗೆ ಮಾಡುವ ಅಪರೂಪದ ಅವಕಾಶ ಸಿಕ್ಕಿದೆಯಲ್ಲ, ಅದು ನನ್ನ ಅದೃಷ್ಟ ಎನ್ನುತ್ತಾ ಸಾರ್ಥಕತೆಯನ್ನು ವ್ಯಕ್ತಪಡಿಸುತ್ತಾರೆ ಡಾ.ರಾಮಕೃಷ್ಣಯ್ಯ.
Advertisement
ಗಂಜಾಂ ಮಂಜು