Advertisement

ಹಾಸನ ಜಿಲ್ಲೆಯಲ್ಲಿ 5 ಪಾಸಿಟಿವ್‌

10:22 AM May 13, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಮಂಗಳವಾರ 5 ಪಾಸಿಟಿವ್‌ ಪ್ರಕರಣಗಳು ವರದಿಯಾ ಗಿವೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯದಿಂದ ಬಂದವ ರನ್ನು 14 ದಿನಗಳ ಕಾಲ  ಕ್ವಾರಂಟೈನ್‌ ನಲ್ಲಿಟ್ಟು ಆನಂತರ ಸ್ವಾಬ್‌ ಪರೀಕ್ಷೆ ನಡೆಸ ಬೇಕು.

Advertisement

ಆದರೆ ಹಾಸನ ಜಿಲ್ಲಾಡಳಿತವು ಹೊರ ರಾಜ್ಯದಿಂದ ಬಂದವರನ್ನು ತಕ್ಷಣವೇ ಪರೀಕ್ಷೆ ನಡೆಸುತ್ತಿದೆ. ಹಾಗಾಗಿ ಮೇ 10 ರಂದು ಮುಂಬೈನಿಂದ ಬಂದ ಚನ್ನರಾಯಪಟ್ಟಣ  ತಾಲೂಕಿನ ಮತಿ ಘಟ್ಟ ಸಮೀಪದ ಮದನೆ ಗ್ರಾಮಕ್ಕೆ ಒಂದು ಬಾಡಿಗೆ ಕಾರಿನಲ್ಲಿ ಬರುತ್ತಿದ್ದ ಒಂದು ಕುಟುಂಬದವರನ್ನು ಅರಸೀಕೆರೆ ಚೆಕ್‌ಪೋಸ್ಟ್‌ನಿಂದಲೇ ನೇರವಾಗಿ ಕ್ವಾರಂ ಟೈನ್‌ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಅವರ ಸ್ವಾಬ್‌  ಪರೀಕ್ಷೆಗೊಳಪಡಿಸಿದಾಗ ಪತಿ (36ವರ್ಷ), ಪತ್ನಿ 27 (ವರ್ಷ) 7 ವರ್ಷ ಹಾಗೂ 4 ವರ್ಷದ ಇಬ್ಬರು ಮಕ್ಕಳಲ್ಲೂ ಕೊರೊನಾ ಪಾಸಿಟಿವ್‌ ಬಂದಿದೆ. ಇನೋವಾ ಕಾರಿನಲ್ಲಿ ಬಂದ ಇಬ್ಬರಲ್ಲಿ ಒಬ್ಬರು ಮಂಡ್ಯ ಜಿಲ್ಲೆ ಕೆ.ಆರ್‌. ಪೇಟೆಗೆ  ಹೋಗಿದ್ದಾರೆ. 45 ವರ್ಷದ ಇನ್ನೊಬ್ಬರನ್ನು ಚನ್ನರಾಯ ಪಟ್ಟಣದ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಅವರಲ್ಲೂ ಪಾಸಿಟಿವ್‌ ಬಂದಿದೆ.

ಕಾರು ಚಾಲಕರು ವಾಪಸ್‌ ಮುಂಬೈಗೆ ಹೋಗಿ ದ್ದಾರೆ. ಪಾಸಿಟಿವ್‌ ಬಂದಿರುವವ ಪ್ರಾಥಮಿಕ ಹಾಗೂ  ದ್ವಿತೀಯ ಹಂತದಸಂಪರ್ಕಿತರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು. ಹೊರ ರಾಜ್ಯಗಳಿಂದ ಬರುವವರನ್ನು ನಿರ್ಬಂಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಎಸ್ಪಿ ಆರ್‌.ಶ್ರೀನಿವಾಸಗೌಡ, ಜಿಪಂ  ಸಿಇಒ ಪರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next