Advertisement
ಐಪಿಎಲ್ ನ ತಾರಾ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಈ ಬಾರಿಯೂ ತಾರಾ ಆಟಗಾರರನ್ನು ಖರೀದಿಸುವ ಯೋಜನೆ ರೂಪಿಸಿದೆ. ಸದ್ಯ ಆರ್ ಸಿಬಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಹೊಸ ನಾಯಕನ ಹುಡುಕಾಟದಲ್ಲಿರುವ ಆರ್ ಸಿಬಿ ತಾರಾ ಆಟಗಾರರ ಮೇಲೆ ಕಣ್ಣಟ್ಟಿದೆ.
Related Articles
Advertisement
ರಾಹುಲ್ ಚಾಹರ್: ಯುಜಿ ಚಾಹಲ್ ರನ್ನು ಕೈಬಿಟ್ಟಿರುವ ಕಾರಣ ಆರ್ ಸಿಬಿಗೆ ಉತ್ತಮ ಸ್ಪಿನ್ನರ್ ನ ಅಗತ್ಯವಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಪರವಾಗಿ ಉತ್ತಮ ಪ್ರದರ್ಶನ ತೋರಿದ ರಾಹುಲ್ ಚಾಹರ್ ರನ್ನು ತನ್ನತ್ತ ಸೆಳೆಯಲು ಆರ್ ಸಿಬಿ ಮುಂದಾಗಬಹುದು. ಅಲ್ಲದೆ ಯುಜಿ ಚಾಹಲ್ ಗೂ ಆರ್ ಸಿಬಿ ಮತ್ತೆ ಪ್ರಯತ್ನ ನಡೆಸಬಹುದು.
ಮಿಚೆಲ್ ಮಾರ್ಶ್: ಆಸ್ಟ್ರೇಲಿಯಾದ ಪ್ರಮುಖ ಆಲ್ ರೌಂಡರ್ ಮಿಚೆಲ್ ಮಾರ್ಶ್ ಅವರು ಈ ಬಾರಿ ಆಸೀಸ್ ಟಿ20 ವಿಶ್ವಕಪ್ ಗೆಲ್ಲಲು ಸಹಾಯಕವಾಗಿದ್ದರು. ಕಳೆದ ಸೀಸನ್ ನಲ್ಲಿ ಎಸ್ ಆರ್ ಎಚ್ ಪರವಾಗಿದ್ದರೂ, ಗಾಯದ ಕಾರಣದಿಂದ ಆಡಲಾಗಿರಲಿಲ್ಲ. ಯಾವುದ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಮಾರ್ಶ್ ಖರೀದಿಗೆ ಬೆಂಗಳೂರು ಫ್ರಾಂಚೈಸಿ ಮುಂದಾಗಬಹುದು.
ಡೆವಾಲ್ಡ್ ಬ್ರೆವಿಸ್: ಈ ಬಾರಿಯ ಅಂಡರ್ 19 ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ ಕೂಡಾ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಕರಿಯಾಗಬಹುದು. ಬೇಬಿ ಎಬಿ ಎಂದೇ ಹೆಸರಾದ ಬ್ರೆವಿಸ್ ಖರೀದಿಗೆ ಆರ್ ಸಿಬಿ ಮುಂದಾಗಬಹುದು.