Advertisement

ವಿದ್ಯುತ್‌ ವೈಫ‌ಲ್ಯ: ಆಸ್ಪತ್ರೆಯಲ್ಲಿ 5 ಸಾವು

06:10 AM May 09, 2019 | Team Udayavani |

ಮದುರೆ: ತಮಿಳುನಾಡಿನ ಮದುರೆಯಲ್ಲಿನ ಸರಕಾರಿ ಸ್ವಾಮ್ಯದ ರಾಜಾಜಿ ಆಸ್ಪತ್ರೆಯಲ್ಲಿ ವಿದ್ಯುತ್‌ ಅಭಾವದಿಂದಾಗಿ ಐವರು ರೋಗಿಗಳು ಸಾವನ್ನಪ್ಪಿದ್ದಾರೆ. ಐಸಿಯುನಲ್ಲಿದ್ದ ಅವರಿಗೆ ಕೃತಕ ಆಮ್ಲಜನಕ ನೀಡಲಾಗುತ್ತಿತ್ತು. ರೋಗಿಗಳು ಸಾವನ್ನಪ್ಪಿದ್ದಕ್ಕೆ ವಿದ್ಯುತ್‌ ಅಭಾವ ಕಾರಣವಲ್ಲ. ಆ ಸಮಯದಲ್ಲೇ ವಿದ್ಯುತ್‌ ಅಭಾವ ಕಂಡುಬಂದಿದ್ದು ಕೇವಲ ಕಾಕತಾಳೀಯ ಎಂದು ಡೀನ್‌ ವನಿತಾ ಹೇಳಿದ್ದಾರೆ. ಆದರೆ ಅಸುನೀಗಿದ ರೋಗಿಗಳ ಸಂಬಂಧಿಗಳು, ವೆಂಟಿಲೇಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಆರೋಪಿಸಿ, ಪ್ರತಿಭಟನೆಯನ್ನೂ ಮಾಡಿದ್ದಾರೆ. ವೆಂಟಿಲೇಟರ್‌ಗಳು ಬ್ಯಾಟರಿ ಚಾಲಿತವಾಗಿದ್ದು, ಇವು ವಿದ್ಯುತ್‌ ಇಲ್ಲದಿದ್ದರೂ ಕೆಲಸ ಮಾಡುತ್ತವೆ. ರೋಗಿಗಳ ಸಂಬಂಧಿಕರ ಆರೋಪ ನಿರಾಧಾರ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next