Advertisement
ಕಳೆದ ಎರಡು ದಿನದಲ್ಲಿ ಸರಕಾರಿ ಸ್ವಾಮ್ಯದ ಆರ್‌ಎಂಎಲ್ ಹಾಸ್ಪಿಟಲ್‌ಗೆ 22 ರೋಗಿಗಳು ದಾಖಲಾಗಿದ್ದು, ಐವರು ಮೃತ ಪಟ್ಟಿದ್ದಾರೆ ಮತ್ತು 12ರಿಂದ 13 ಜನರಿಗೆ ವೆಂಟಿಲೇಟರ್ ನೆರವು ಒದಗಿಸಲಾಗಿದೆ. ಅದೇ ರೀತಿ ಸಫªರ್‌ಗಂಜ್ ಹಾಸ್ಪಿಟಲ್‌ನಲ್ಲೂ 60 ಉಷ್ಣಾಘಾತ ಪ್ರಕರಣಗಳು ವರದಿಯಾಗಿವೆ.
Related Articles
12 ವರ್ಷಗಳಲ್ಲೇ ಜೂ. 18ರಂದು ದಿಲ್ಲಿಯು ಗರಿಷ್ಠ “ಬಿಸಿ ರಾತ್ರಿ’ಗೆ ಸಾಕ್ಷಿಯಾಗಿದ್ದು, 35.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ ಇದು ಸಾಮಾನ್ಯಕ್ಕಿಂತ 8 ಡಿಗ್ರಿ ಸೆ. ಹೆಚ್ಚು. ದಿನದಲ್ಲಿ ಗರಿಷ್ಠ 43.6 ಡಿ.ಸೆ. ತಾಪದಾಖಲಾಗಿದ್ದರೆ ಈ ಋತುವಿನ ಸಾಮಾನ್ಯ ಉಷ್ಣಾಂಶಕ್ಕಿಂತ 4.8ಕ್ಕಿಂತ ಹೆಚ್ಚು ಎಂದು ತಿಳಿಸಿದೆ.
Advertisement
11 ರಾಜ್ಯಗಳಲ್ಲಿ ಸರಾಸರಿ 45 ಡಿ.ಸೆ. ತಾಪಹೊಸದಿಲ್ಲಿ: ಭಾರತದ ಉತ್ತರ ಹಾಗೂ ಪೂರ್ವ ದಿಕ್ಕಿನ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಂಜಾಬ್, ಹರಿಯಾಣ, ಹೊಸದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಝಾರ್ಖಂಡ್, ಜಮ್ಮು, ಬಿಹಾರ ರಾಜ್ಯಗಳಲ್ಲಿ ಸರಾಸರಿ 43-45 ಡಿ.ಸೆ. ತಾಪಮಾನ ದಾಖಲಾಗಿದೆ. ಹರಿಯಾಣದ ನೂಹ್‌ನಲ್ಲಿ 45.3 ಡಿಗ್ರಿ ಸೆ., ಗುರುಗ್ರಾಮ, ಫರೀದಾಬಾದ್‌ನಲ್ಲಿ 45 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು.