Advertisement
ಕೊರೊನಾ ಹಿನ್ನೆಲೆ ಕಳೆದೆರೆಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ನಾಡಹಬ್ಬಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಈ ಬಾರಿ ಎರಡು ತಿಂಗಳು ಮುಂಚೆಯೇ ಗಜಪಡೆಯನ್ನು ಮೈಸೂರಿಗೆ ಕರೆತಂದು ಎಲ್ಲಾ ಹಂತದ ತಾಲೀಮುನಡೆಸಲು ಮೈಸೂರು, ಚಾಮರಾಜನಗರ ಹಾಗೂಕೊಡಗು ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ಅರಣ್ಯಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
Related Articles
Advertisement
ಮೊದಲ ಹಂತದಲ್ಲಿ ಪ್ರಮುಖ ಆನೆಗಳನ್ನು ಗಜಪಯಣದ ಮೂಲಕ ಕರೆತಂದರೆ, ಉಳಿದ ಆನೆಗಳನ್ನು ವಾರದ ಬಳಿಕ ಕರೆತಂದು ಒಣ ತಾಲೀಮು, ಮರದ ಅಂಬಾರಿ ಹೊರುವ ಹಾಗೂ ಭಾರ ಹೊರವ ತಾಲೀಮು ನಡೆಸಲಾಗುತ್ತದೆ. ಇದರ ಜೊತೆ ಜೊತೆಗೆ ಪ್ರತಿವಾರ ಸಿಡಿಮದ್ದು ತಾಲೀಮು ನಡೆಸಿ ದಸರಾ ಉತ್ಸವಕ್ಕೆ ಸಂಪೂರ್ಣವಾಗಿ ಅಣಿಗೊಳಿಸಲಾಗುತ್ತದೆ.
5 ಹೊಸ ಆನೆಗಳು: ಈ ಬಾರಿಯ ದಸರಾ ಉತ್ಸವಕ್ಕೆ 5 ಹೊಸ ಆನೆಗಳನ್ನು ಕರೆ ತರಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ದುಬಾರೆ ಮತ್ತು ಮತ್ತಿಗೋಡು ಆನೆಶಿಬಿರದಿಂದ ಗಣೇಶ, ಮಹೇಂದ್ರ, ಭೀಮ, ಸುಗ್ರೀವಹಾಗೂ ಅಜೇಯ ಆನೆಯನ್ನು ಕರೆ ತರುವ ನಿರೀಕ್ಷೆಇದೆ. ಈ ಮೂಲಕ ದಸರಾ ಉತ್ಸವಕ್ಕೆ 2ನೇ ಹಂತದಆನೆಗಳನ್ನು ಅಣಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಒಟ್ಟಾರೆ ಆಗಸ್ಟ್ ಮೊದಲ ವಾರದಲ್ಲಿ ಗಜಪಯಣ ನಡೆಸಿ, 14ರಿಂದ 15 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಇವುಗಳಲ್ಲಿ ವಿಜಯ,ಕಾವೇರಿ, ಚೈತ್ರ, ಲಕ್ಷ್ಮೀ ಹೆಣ್ಣಾನೆಗಳು ಭಾಗವಹಿಸುವುದು ನಿಚ್ಚಳವಾಗಿದ್ದು, ಅಂಬಾರಿ ಆನೆ ಅಭಿಮನ್ಯು,ಅರ್ಜುನ, ಅಶ್ವತ್ಥಾಮ, ವಿಕ್ರಮ, ಧನಂಜಯ,ಗೋಪಾಲಸ್ವಾಮಿ ಆನೆಗಳು ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಎರಡು ಹಂತದಲ್ಲಿ 14ರಿಂದ 15 ಆನೆಗಳನ್ನು ದಸರಾ ಉತ್ಸವಕ್ಕೆ ಕರೆತರಲು ನಿರ್ಧರಿಸಲಾಗಿದ್ದು, ಅದಕ್ಕಾಗಿ 20 ಆನೆಗಳ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿ ಕೊಡಲಾಗಿದೆ. ಅಲ್ಲಿ ಪಟ್ಟಿ ಅಂತಿಮ ವಾದಬಳಿಕ ಮೈಸೂರಿನಲ್ಲಿ ಎಪಿಸಿಸಿಎಫ್ ನೇತೃತ್ವದಲ್ಲಿ ಸಭೆ ನಡೆಸಿ ಆನೆಗಳನ್ನು ಕರೆತರುತ್ತೇವೆ. – ಡಾ.ವಿ. ಕರಿಕಾಳನ್, ಡಿಸಿಎಫ್ ಮೈಸೂರು
– ಸತೀಶ್ ದೇಪುರ