Advertisement
ಮಂಗಳೂರು-ಮೂಡಿಗೆರೆ ರಾಜ್ಯ ಹೆದ್ದಾರಿಯ ಮುಂಡಾಜೆ ಸೇತುವೆ ಬಳಿ ಮೃತ್ಯುಂಜಯ ನದಿಯಲ್ಲಿ ಸುಮಾರು 200 ಮೀ. ದೂರದವರೆಗೆ ಸುಮಾರು 5 ಮೀ. ಎತ್ತರಕ್ಕೆ ಮರಳು ಬಂದು ಬಿದ್ದಿದ್ದು, ನದಿ ಹರಿಯುವ ದಿಕ್ಕನ್ನೇ ಬದಲಾಯಿಸಿದೆ. ಸೇತುವೆ ಬಳಿ ನೀರು ಹರಿದು ಬರುವ ಸ್ಥಳದಲ್ಲಿರುವ ಮರಳು ನಿಂತಿದ್ದು, ಈ ಮಳೆಗಾಲದಲ್ಲಿ ಸೇತುವೆಗೆ ಹಾನಿ ಯಾಗುವ ಸಾಧ್ಯತೆ ಇದೆ. ಈ ಸೇತುವೆಗೆ ಹಾನಿ ಸಂಭವಿಸಿ ರಸ್ತೆ ಹಾನಿಯಾದರೆ, ಚಾರ್ಮಾಡಿ ಮೂಲಕ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. ಕೆಳಭಾಗದಲ್ಲಿರುವ ಮುಂಡಾಜೆ ವಾಳ್ಯ, ಕಲ್ಮಂಜ ಭಾಗದ ತೋಟಗಳಿಗೆ ಮತ್ತೆ ಪ್ರವಾಹದೊಂದಿಗೆ ಮರಳು ನುಗ್ಗುವ ಸಾಧ್ಯತೆಯಿದೆ. ಮರಳು ತೆರವು ಬಗ್ಗೆ ವಿಚಾರಿಸಿದರೆ, ಒಂದು ಇಲಾಖೆ ಇನ್ನೊಂದು ಇಲಾಖೆಯತ್ತ ಬೆರಳು ತೋರಿಸುತ್ತಿದೆ.
ಕಳೆದ ವರ್ಷದ ಪ್ರವಾಹದ ಸಮಯ ಕೃಷಿ ತೋಟಗಳಿಗೆ ನುಗ್ಗಿದ ಮರಳು ತೆರವಿಗೆ ಸರಕಾರ ಈ ಭಾಗದ ಪ್ರವಾಹ ಪೀಡಿತರಿಗೆ ಪ್ರತಿ ಎಕ್ರೆಗೆ 11,000 ರೂ.ಗೂ ಹೆಚ್ಚಿನ ಪರಿಹಾರ ಮೊತ್ತ ಮಂಜೂರು ಮಾಡಿತ್ತು. ಈಗ ನದಿಯಲ್ಲಿ ತುಂಬಿರುವ ಮರಳು ಈ ಬಾರಿ ಮತ್ತೆ ತೋಟಗಳಿಗೆ ಬಂದು ಬಿದ್ದರೆ ಮತ್ತೆ ಪರಿಹಾರ ನೀಡಬೇಕಾಗುತ್ತದೆ. ನದಿ ಪಾತ್ರಗಳಲ್ಲಿರುವ ಮರಳನ್ನು ಸರಕಾರದ ವತಿಯಿಂದ ತೆರವುಗೊಳಿಸಿದರೆ ಸರಕಾರದ ಹಣ ಪರಿಹಾರ ರೂಪದಲ್ಲಿ ಪೋಲಾಗುವುದು ತಪ್ಪುತ್ತದೆ.
Related Articles
ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೇತುವೆಯ ಆಸು ಪಾಸಿನಲ್ಲಿರುವ ಮರಳನ್ನು ತೆರವು ಗೊಳಿಸುವಂತೆ ಸೂಚಿಸಲಾಗಿದೆ.
-ನಿರಂಜನ್, ಅಡಿಶನಲ್ ಡೈರೆಕ್ಟರ್,
ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಮಂಗಳೂರು
Advertisement
ತೆರವು ಅಗತ್ಯಕಳೆದ ಮಳೆಗಾಲದಲ್ಲಿ ತೋಟಕ್ಕೆ ನೆರೆಯೊಂದಿಗೆ ನುಗ್ಗಿದ ಮರಳಿನಿಂದ ಸಾಕಷ್ಟು ನಷ್ಟ ಉಂಟಾಗಿದೆ. ಸೇತುವೆ ಬಳಿ ಇರುವ ಮರಳನ್ನು ತೆರವುಗೊಳಿಸದಿದ್ದಲ್ಲಿ ಈ ಮಳೆ ಗಾಲದಲ್ಲಿ ಪ್ರವಾಹ ಉಂಟಾದರೆ ಅಡಿಕೆ ತೋಟಗಳು ಸಂಪೂರ್ಣ ನಾಶ ವಾಗಲಿವೆ. ಮರಳನ್ನು ಕೂಡಲೇ ತೆರವು ಗೊಳಿಸುವುದು ಅವಶ್ಯ.
– ಶಶಿಧರ ಠೊಸರ್
ಸಕೃಷಿಕರು, ಮುಂಡಾಜೆ