ಹುಣಸೂರು:ಸಿಡಿಲಿಗೆ ಬಲಿಯಾಗಿದ್ದ ತಾಲೂಕಿನ ಮಂಟಿಕೊಪ್ಪಲಿನ ರೈತ ಹರೀಶ್ ಕುಟುಂಬಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ 5 ಲಕ್ಷರೂ.ಪರಿಹಾರ ಧನದ ಚೆಕ್ಕನ್ನು ವಿತರಿಸಿದರು.
ಇತ್ತೀಚೆಗೆ ಹುಣಸೂರು ತಾಲೂಕಿನ ಮಂಟಿಕೊಪ್ಪಲು ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದ ವೇಳೆ ಸಿಡಿಲು ಬಡಿದು ರೈತ ಹರೀಶ್ ಸಾವನ್ನಪ್ಪಿದ್ದರು. ಅಂದೇ ಶಾಸಕ ಹರೀಶ್‌ಗೌಡರವರು ಜಿಲ್ಲಾಧಿಕಾರಿಯರನ್ನು ಸಂಪರ್ಕಿಸಿ ಸಂಕಷ್ಟದಲ್ಲಿರುವ ನೊಂದ ಕುಟುಂಬಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳು ಪರಿಹಾರ ನೀಡಲು ಯೋಜನೆಯಲ್ಲಿ ಹಣವಿದ್ದು ತಕ್ಷಣವೇ ಸ್ಪಂದಿಸುವ ಭರವಸೆ ನೀಡಿದ್ದರು. ಶುಕ್ರವಾರದಂದು ತಾಲೂಕು ಆಡಳಿತದೊಂದಿಗೆ ಮೃತ ರೈತನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಶಾಸಕ ಹರೀಶ್ ಗೌಡರು ಸರಕಾರದ ಪ್ರಕೃತಿವಿಕೋಪ ಯೋಜನೆಯಡಿ ೫ ಲಕ್ಷರೂನ ಚೆಕ್‌ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಅಶೋಕ್, ರೆವಿನ್ಯೂಇನ್ಸ್ಪೆಕ್ಟರ್ ನಂದೀಶ್, ಗ್ರಾಮ ಆಡಳಿತಾಧಿಕಾರಿ ಸುಮಂತ್ ಗ್ರಾಮಸ್ಥರು ಉಪಸ್ಥಿತರಿದ್ದರು.