Advertisement
ಚಟುವಟಿಕೆಯ ತಾಣವಾಗಿತ್ತುಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆ ಇದೀಗ ಯಾವುದೇ ಚಟುವಟಿಕೆಗಳಿಲ್ಲದೆ ಅನಾಥವಾಗಿದೆ. ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿ ಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಅನಂತರ 2 ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಈ ಕಟ್ಟಡವನ್ನು ಪ್ರವಾಸಿ ಬಂಗಲೆಯಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ತಾ.ಪಂ., ಗ್ರಾ.ಪಂ. ಆಡಳಿತ ಇದರ ನಿರ್ವಹಣೆಯ ಹೊಣೆ ಹೊತ್ತು ಕೊಂಡಿತಾದರೂ ಈಗ ಈ ಕಟ್ಟಡವನ್ನು ಯಾರೂ ಕೇಳುವವರಿಲ್ಲದಂತಾಗಿದೆ.
ಉಪಯೋಗವಿಲ್ಲದೆ ಪಾಳುಬಿದ್ದಿರುವ ಈ ಕಟ್ಟಡ ಈಗ ಭೂತ ಬಂಗಲೆ ಯಂತೆ ಕಂಡುಬರುತ್ತಿದೆ. ಆವರಣ ಗೋಡೆ ಕುಸಿದುಬಿದ್ದಿರುವ ಈ ಪ್ರದೇಶವನ್ನು ಸಾರ್ವಜನಿಕರು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಉಪಯೋಗಿಸುತ್ತಿರುವುದರಿಂದಾಗಿ ಈ ಪರಿಸರ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಗಬ್ಬು ನಾರುತ್ತಿರುವ ಹಾಸಿಗೆಗಳು, ಪೀಠೊಪಕ ರಣಗಳು, ಸೋಫಾಗಳು, ಅಸಹ್ಯ ಉಂಟು ಮಾಡುವ ಶೌಚಾಲಯಗಳು, ಜೇಡರ ಬಲೆ, ಬಿರುಕು ಬಿಟ್ಟಿರುವ ಗೋಡೆಗಳು, ವಿದ್ಯುತ್ ಉಪಕರಣಗಳು ಸ್ತಬ್ದಗೊಂಡಿದೆ. ಮೂಲತಃ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಕಟ್ಟಡವನ್ನು ಮತ್ತೆ ಆಸ್ಪತ್ರೆಯ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯವರ ಮುಖಾಂತರ ಜಿ.ಪಂ.ಗೆ ಮನವಿ ಸಲ್ಲಿಸಲಾಗಿತ್ತು. ಜಿ.ಪಂ.ಸಿಇಒ ಈ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಿದ್ದರೂ ಯಾವುದೇ ಲಿಖಿತ ಆದೇಶ ನೀಡದಿರುವುದರಿಂದಾಗಿ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಚಟುವಟಿಕೆಯ ತಾಣವಾಗಲಿ
ಪೇಟೆಯ ಹೃದಯ ಭಾಗದಲ್ಲಿರುವ ಈ ಕಟ್ಟಡದಲ್ಲಿ ಯಾವುದಾದರೊಂದು ಪ್ರಮುಖ ಇಲಾಖೆಯ ಕಚೇರಿ ತೆರೆಯುವ ಅವಕಾಶವಿದೆ. ಇದೀಗ ಕಟ್ಟಡವನ್ನು ದುರಸ್ತಿಗೊಳಿಸಿ ತಾ| ಮಟ್ಟದ ಯಾವುದಾದರೂ ಸರಕಾರಿ ಕಚೇರಿಗೆ ಬಳಸಿಕೊಳ್ಳುವು ಉದ್ದೇಶದಿಂದ 5 ಲಕ್ಷ ರೂ. ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ಕಡಬವು ಪೂರ್ಣಪ್ರಮಾಣದ ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ನಿರುಪಯುಕ್ತವಾಗಿರುವ ಈ ಕಟ್ಟಡ ಮತ್ತೆ ಚಟುವಟಿಕೆಯ ತಾಣವಾಗಿ ಸಾರ್ವಜನಿಕರಿಗೆ ಪ್ರಯೋಜನಕ್ಕೆ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.
Related Articles
ಪ್ರವಾಸಿ ಮಂದಿರವನ್ನು ದುರಸ್ತಿಗೊಳಿಸಿ ಮತ್ತೆ ಉಪಯೋಗಕ್ಕೆ ಸಿದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಶಿಥಿಲಗೊಂಡಿರುವ ಗೋಡೆ ಹಾಗೂ ಛಾವಣಿಯನ್ನು ದುರಸ್ತಿಗೊಳಿಸಿ ಸುಸ್ಥಿತಿಗೆ ತರಲು ಜಿ.ಪಂ.ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು 5 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿದ್ದಾರೆ. ಕಟ್ಟಡದ ಆವರಣವನ್ನು ಶುಚಿಗೊಳಿಸಿ ನೀರು ನಿಲ್ಲದಂತೆ ಮಣ್ಣು ಹಾಕಿ ಎತ್ತರಿಸಿ ಸ್ವಲ್ಪ ಭಾಗಕ್ಕೆ ಇಂಟರ್‌ಲಾಕ್ ಅಳವಡಿಸಲು ಚಿಂತಿಸಲಾಗಿದೆ. ಶೀಘ್ರದಲ್ಲಿ ದುರಸ್ತಿ ಕಾರ್ಯ ಆರಂಭಿಸುವ ಪ್ರಯತ್ನದಲ್ಲಿದ್ದೇವೆ.
– ಪಿ.ಪಿ. ವರ್ಗೀಸ್,
ಜಿ.ಪಂ. ಸದಸ್ಯರು, ಕಡಬ ಕ್ಷೇತ್ರ
Advertisement
. ನಾಗರಾಜ್ ಎನ್.ಕೆ.