ನಗರದ ಬಿಕೆಡಿಬಿ ಸಭಾಂಗಣದಲ್ಲಿ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ 178ನೇ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫೋಟೋಗ್ರಾಫೀ ಎನ್ನುವುದು ವೃತ್ತಿಯಷ್ಟೇ ಅಲ್ಲ ಸಾಕಷ್ಟು ಜನರ ಹವ್ಯಾಸವೂ ಆಗಿದೆ. ಮಹತ್ವದ ವೃತ್ತಿಯಲ್ಲಿ ತೊಡಗಿರುವ ನಿಮ್ಮ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಅಸೋಶಿಯೇಶನ್ ಜಿಲ್ಲಾ ಅಧ್ಯಕ್ಷ ದಿಲೀಪಕುಮಾರ ಮಾತನಾಡಿ, ಜಿಲ್ಲಾ ಹಾಗೂ ಪ್ರತಿ ತಾಲೂಕು ಮಟ್ಟದ ಫೋಟೋಗ್ರಾಫೀ ಭವನ ನಿರ್ಮಾಣ ಮಾಡಬೇಕು ಎಂದು ವೇದಿ ಕೆಯಲಿದ್ದ ಸಂಸದ, ಶಾಸಕರಲ್ಲಿ ಮನವಿ ಮಾಡಿದರು. ಸಾನ್ನಿಧ್ಯ ವಹಿಸಿದ್ದ ತ್ರಿಪುರಾಂತ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಛಾಯಾ ಚಿತ್ರ ಅದ್ಭುತ ಕಲೆ. ಒಂದು ಸಾವಿರ ಪದಗಳಿಗೆ ಒಂದು ಚಿತ್ರ ಸರಿಸಮವಾಗಬಲ್ಲದು. ಒಂದು ಅಮೂಲ್ಯ ಚಿತ್ರ ಸೆರೆ ಹಿಡಿಯಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಛಾಯಾಗ್ರಾಹಕರಲ್ಲಿ ತಾಳ್ಮೆ ಮತ್ತು ಸಹನೆ ಅಗತ್ಯವಾಗುತ್ತದೆ. ಇದನ್ನು ಬೆಳೆಸಿಕೊಂಡವರು ಮಾತ್ರ ಶ್ರೇಷ್ಠ ಛಾಯಾಗ್ರಾಹಕ ಆಗಬಲ್ಲ ಎಂದರು. ಶಾಸಕ ಮಲ್ಲಿಕಾರ್ಜುನ ಖೂಬಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮಾಜಿ ಶಾಸಕ ಎಂ.ಜಿ. ಮುಳೆ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಯುವ ಮುಖಂಡರಾದ ಲಿಂಗರಾಜ ಪಾಟೀಲ್ ಅಟ್ಟೂರ್, ವಿಜಯಕುಮಾರ ಮಂಠಾಳೆ, ವಾತಡೆ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ವಾತಡೆ, ಅಸೋಶಿಯೇಷನ್ ಜಿಲ್ಲಾ ಅಧ್ಯಕ್ಷ ದಿಲೀಪಕುಮಾರ ಮಾತನಾಡಿದರು. ನಗರಸಭೆ ಅಧ್ಯಕ್ಷ ಮೀರ ಅಜರಲಿ ನವರಂಗ, ಪಿಎಸ್‌ಐ ಗುರು ಪಾಟೀಲ್, ಯುವರಾಜ ಜಾಧವ, ನಗರಸಭೆ ಸದಸ್ಯ ಅನೀಲ ಕುಲ್ಕರ್ಣಿ, ಅಸೋಸಿಯೇಶನ ತಾಲೂಕು ಅಧ್ಯಕ್ಷ ದಿನೇಶ ಗೊಂಟಲ್, ಹಿರಿಯ ಫೋಟೋಗ್ರಾಫರ್ ಗಳಾದ ಕಾಳಿದಾಸ ಘಾಳೆ, ಸುರೇಶ ಗೊಂಟಲ್, ಪ್ರಫುಲಕುಮಾರ ಗಾಯಕವಾಡ, ಅಶೋಕ ಸಜ್ಜನಶೆಟ್ಟಿ ಉಪಸ್ಥಿತರಿದ್ದರು. ವಿರಶೆಟ್ಟಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರನ ಟಿವಿ ಆ್ಯಂಕರ್‌ಗಳಾದ ಶ್ರೀನಿವಾಸ ಮತ್ತು ಶೃತಿ ಕಾರ್ಯಕ್ರಮ ನಿರೂಪಿಸಿದರು.
Advertisement