Advertisement

5 ಇಂದಿರಾ ಕ್ಯಾಂಟೀನ್‌ಗೆ ಸಚಿವ ಲಾಡ್‌ ಚಾಲನೆ

05:19 PM Mar 13, 2018 | Team Udayavani |

ಬಳ್ಳಾರಿ: ನಗರದ ಪ್ರಮುಖ ಜನನಿಬೀಡ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಐದು ಇಂದಿರಾ ಕ್ಯಾಂಟೀನ್‌ಗಳಿಗೆ ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಸೋಮವಾರ ಚಾಲನೆ ನೀಡಿದರು.

Advertisement

ನಗರದ ಬುಡಾ ಕಚೇರಿ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ನನ್ನು ಮೊದಲು ಉದ್ಘಾಟಿಸಿದ ಸಚಿವ ಸಂತೋಷ್‌ಲಾಡ್‌, ಅಲ್ಲಿನ ಅಡುಗೆಯ ರುಚಿಯನ್ನು ಸವಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು 5 ರೂ.ಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು 10ರೂ.ಗಳಂತೆ 25 ರೂ.ಗಳಲ್ಲಿ ದಿನದ ಮೂರು ಹೊತ್ತು ಗುಣಮಟ್ಟದ ಊಟವನ್ನು
ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿತರಿಸಲಾಗುತ್ತದೆ. ಬಡಜನರಿಗೆ ಇದು ತುಂಬ ಅನುಕೂಲವಾಗಲಿದೆ ಎಂದರು.

ಬಳ್ಳಾರಿ ನಗರದಲ್ಲಿ 5, ಹೊಸಪೇಟೆಯಲ್ಲಿ 3 ಮತ್ತು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ. ಜಮೀನುಗಳ ಕೊರತೆಯುಳ್ಳ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ,
ಇನ್ನುಳಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇನ್ನೊಂದು ತಿಂಗಳೊಳಗಾಗಿ ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಗುತ್ತದೆ. ಪ್ರತಿದಿನ ಒಂದು ಕ್ಯಾಂಟೀನ್‌ನಲ್ಲಿ ಒಂದು ಸಲಕ್ಕೆ ಕನಿಷ್ಠ 500 ಕೂಪನ್‌ಗಳಂತೆ ದಿನಕ್ಕೆ 1500, ಐದು ಕ್ಯಾಂಟೀನ್‌ ಸೇರಿ ದಿನಕ್ಕೆ 7500 ಜನರಿಗೆ
ಕಡಿಮೆ ದರದಲ್ಲಿ ಉಪಹಾರ, ಊಟ ದೊರೆಯಲಿದೆ. ಊಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‌ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂ ಧಿಯವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದು ಸ್ಮರಿಸಿದರು.

ಬಳಿಕ ನಗರದ ಎಪಿಎಂಸಿ, ವಿಮ್ಸ್‌ ಆಸ್ಪತ್ರೆ ಆವರಣ, ಬೆಳಗಲ್‌ ಕ್ರಾಸ್‌, ಜಿಲ್ಲಾಸ್ಪತ್ರೆ ಆವರಣಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದರು. ಐಸಿಸಿ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಲ್ಲಿ ಹೆಚ್ಚು ಕಡಿಮೆಯಾದರೆ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಸಭೆಯ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಜಲಾಶಯದ ಅಧಿ ಕಾರಿಯೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ನೀರು
ಕಡಿತಗೊಳಿಸಲ್ಲ. ಮಾ.21 ಬದಲಿಗೆ 25ರವರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಅನಿಲ್‌ ಲಾಡ್‌, ಜಿಲ್ಲಾಧಿ ಕಾರಿ ಡಾ| ವಿ.ರಾಮ್‌ ಪ್ರಸಾತ್‌ ಮನೋಹರ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಬುಡಾ ಅಧ್ಯಕ್ಷ ಅಂಜನೇಯಲು, ಎಪಿಎಂಸಿ ಅಧ್ಯಕ್ಷ ನಾಗರಾಜ, ಜಿಪಂ ಸದಸ್ಯ ಅಲ್ಲಂ ಪ್ರಶಾಂತ, ಮಹಾನಗರ ಪಾಲಿಕೆ ಆಯುಕ್ತ
ಎಂ.ಕೆ.ನಲ್ವಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹ್ಮದ್‌ ಮುನೀರ್‌ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next