Advertisement

ಜು.18-19: 5 ಸದಸ್ಯರ ಸಾಂವಿಧಾನಿಕ ಪೀಠದಿಂದ ಆಧಾರ್‌ ಮನವಿ ವಿಚಾರಣೆ

12:26 PM Jul 12, 2017 | udayavani editorial |

ಹೊಸದಿಲ್ಲಿ : ಖಾಸಗಿತನದ ಹಕ್ಕು ಸೇರಿದಂತೆ ಆಧಾರ್‌ ಗೆ ಸಂಬಂಧಿಸಿದ ಹಲವಾರು ಮೂಲಭೂತ ಪ್ರಶ್ನೆಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ಜುಲೈ 18 ಮತ್ತು 19ರಂದು ಐವರು ಸದಸ್ಯರ ಸಂವಿಧಾನ ಪೀಠವು ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಬುಧವಾರ ಹೇಳಿದೆ. 

Advertisement

ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್‌ ಜೆ ಎಸ್‌ ಖೇಹರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠದ ಮುಂದೆ ಇಂದು ಅಧಾರ್‌ ವಿಷಯವನ್ನು ಉಲ್ಲೇಖೀಸಲಾದಾಗ, ಪೀಠವು “ಆಧಾರ್‌ ಕುರಿತ ಎಲ್ಲ ಮೂಲಭೂತ ಪ್ರಶ್ನೆಗಳನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠ ನಿರ್ಧರಿಸಲಿದೆ’ ಎಂದು ಹೇಳಿದರು. 

ಆಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಮತ್ತು ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು “ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಸರಕಾರ ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿರುವ ಅರ್ಜಿದಾರರ ಪರವಾಗಿ ಇಂದು ಸುಪ್ರೀಂ ಕೋರ್ಟ್‌ ನಲ್ಲಿ ಹಾಜರಾಗಿ ವಿಷಯವನ್ನು ಎತ್ತಿದಾಗ ಅವರು ಪೀಠವು ಈ ರೀತಿಯ ಉತ್ತರ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next