Advertisement

ಸಿಂಗಾಪುರ: ಐವರು ಭಾರತ ಸಂಜಾತರ ವಿರುದ್ಧ ಮಾರಣಾಂತಿಕ ಹಲ್ಲೆ ದೋಷರೋಪ

05:02 PM Jul 27, 2018 | udayavani editorial |

ಸಿಂಗಾಪುರ : 26ರ ಹರೆಯದ ದಿನೇಶ್‌ ಸೆಲ್ವರಾಜ್‌ ಎಂಬಾತನನ್ನು ಭಾರತೀಯ ಮೂಲದವರೇ ಆಗಿರುವ ಐವರು ಸಿಂಗಾಪುರ ವಾಸಿಗಳು ಇಲ್ಲಿನ ಲಿಟ್ಲ ಇಂಡಿಯಾ ಪ್ರಸಿಂಕ್ಟ್ ನಲ್ಲಿ ಮಾರಕ ಆಯುಧಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಗೈದ ಆರೋಪದ ಮೇಲೆ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. 

Advertisement

ದೋಷಾರೋಪಕ್ಕೆ ಗುರಿಯಾಗಿರುವ ವಿಕ್ಟರ್‌ ಅಲೆಕ್ಸಾಂಡರ್‌ ಆರ್ಮುಗಂ, ಅರ್ಜುನ್‌ ರತ್ನವೇಲು, ಹರೀಶ್‌ ಶಣ್ಮುಗನಾಥನ್‌, ದಿನೇಶ್‌ ಕುಮಾರ್‌ ರುವಿ ಮತ್ತು ಶರ್ವಿನ್‌ ರಾಜ್‌ ಸೂರಜ್‌ (ಎಲ್ಲರೂ 17ರಿಂದ 28ರ ಒಳಗಿನ ವಯೋಮಾನದವರು) ಅವರ ಆರೋಪ ಸಾಬೀತಾದರೆ ಅವರಿಗೆ 10 ವರ್ಷ ಜೈಲು  ಮತ್ತು ಬೆತ್ತ ಪ್ರಹಾರದ ಶಿಕ್ಷೆ ಆಗಲಿದೆ. 

ಇನ್ನೂ ಇಬ್ಬರು ಸಿಂಗಾಪುರ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದ್ದು ಅವರ ವಿರುದ್ಧ ಇದೇ ಪ್ರಕರಣದಲ್ಲಿ ದೋಷಾರೋಪ ಹೊರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next