Advertisement

Road Mishap: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು

03:11 PM Sep 12, 2024 | Team Udayavani |

ತಮಿಳುನಾಡು: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ವರ್ಷದ ಮಗು ಸೇರಿದಂತೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ಬಳಿ ಸಂಭವಿಸಿದೆ.

Advertisement

ಚೆನ್ನೈನ ಈ ಕುಟುಂಬ ಮೈಲಾಡುತುರೈಗೆ ಹೋಗುತ್ತಿತ್ತು. ಮೃತರನ್ನು ಯಾಸಿರ್ (40), ಮೊಹಮ್ಮದ್ ಅನ್ವರ್ (56), ಹಜಿತಾ ಬೇಗಂ (62), ಸರ್ಪಾದ್ ನಿಶಾ (30) ಮತ್ತು ಅಪ್ನಾನ್ ಎಂಬ 3 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ ಮೈಲಾಡುತುರೈ ನಿವಾಸಿ ಮುಹಮ್ಮದ್ ಅನ್ವರ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಸಂಬಂಧಿಕರೊಬ್ಬರ ಅರೋಗ್ಯ ವಿಚಾರಿಸಿ ಬಳಿಕ ಚೆನ್ನೈನಿಂದ ತಮ್ಮ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದಾಗ ಚಿದಂಬರಂನ ಮುಟ್ಲೂರು ಸೇತುವೆಯ ಬಳಿ ಎದುರಿನಿಂದ ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಲ್ಲದೆ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರ ತಂಡ ಕಾರಿನೊಳಗೆ ಸಿಲುಕಿದ್ದ ಮೃತದೇಶಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು, ಬಳಿಕ ದೇಹಗಳನ್ನು ಶವಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್

Advertisement
Advertisement

Udayavani is now on Telegram. Click here to join our channel and stay updated with the latest news.