Advertisement

Bank ಉದ್ಯೋಗಿಗಳ 5 ದಿನಗಳ ಕೆಲಸದ ಬೇಡಿಕೆಗೆ ಶೀಘ್ರ ಅಸ್ತು?

02:07 AM May 05, 2024 | Team Udayavani |

ಹೊಸದಿಲ್ಲಿ: ಬ್ಯಾಂಕ್‌ ಉದ್ಯೋಗಿಗಳ 5 ದಿನಗಳ ಕೆಲಸದ ಬೇಡಿಕೆ ಈಡೇರುವ ಹಂತಕ್ಕೆ ತಲುಪಿದೆ. ಈ ಸಂಬಂಧಿಸಿದಂತೆ ಈಗಾಗಲೇ ಹಲವು ಒಪ್ಪಂದ ಗಳಾಗಿದ್ದು, ಇದೀಗ ಸರಕಾರದ ಅಧಿಕೃತ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ. ವಾರದಲ್ಲಿ 5 ದಿನ ಕಾರ್ಯನಿರ್ವಹಿಸಿ ಶನಿವಾರ ಮತ್ತು ಭಾನುವಾರ ರಜೆ ಪಡೆಯಲು ಅವಕಾಶ ನೀಡುವ ನೀತಿ ರೂಪಿಸುವಂತೆ ಕಳೆದ ಕೆಲವು ಸಮ ಯದಿಂದಲೂ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟಗಳು ಬೇಡಿಕೆ ಇಟ್ಟಿದ್ದವು. ಅದರಂತೆ ಇತ್ತೀಚೆಗಷ್ಟೇ ಇಂಡಿ ಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ ಮತ್ತು ನೌಕರರ ಒಕ್ಕೂಟದ ನಡುವೆ ಒಪ್ಪಂದವಾಗಿದ್ದು, ಅದನ್ನು ಆರ್‌ಬಿಐ ಜತೆಗೂ ಚರ್ಚಿಸಲಾಗಿದೆ.ಇದೀಗ ಪ್ರಸ್ತಾವನೆ ಯನ್ನು ಸರಕಾರದ ಮುಂದಿಟ್ಟಿದ್ದು ಶೀಘ್ರವೇ ಅನುಮೋದನೆ ದೊರೆಯಬಹದು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next