Advertisement
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ 2017ನೇ ಸಾಲಿನಲ್ಲಿ ರಾಷ್ಟ್ರೀಯ ಡೈರಿ ಎಕ್ಸಲೆನ್ಸ್ ಅವಾರ್ಡ್ ದೊರೆತ ಹಿನ್ನೆಲೆಯಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಗುರುವಾರ ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಭವನದಲ್ಲಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಸಮ್ಮಾನ ಸಮಾರಂಭ ಜರಗಿತು. ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ ಒಕ್ಕೂಟದ ಜಿಲ್ಲಾ ನಿರ್ದೇಶಕ ಸವಣೂರು ಸೀತಾರಾಮ ರೈ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಬೇಡಿಕೆ ಇತ್ತು. ಕೊನೆಗೂ ಈಡೇರಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಿಂದ ಬರುವ ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಅನಿವಾರ್ಯ ಸಂದರ್ಭ ಉಳಿದುಕೊಳ್ಳಲು ಸಹಾಯ ಆಗುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಸಭೆ ಸಮಾರಂಭಕ್ಕೆ ಸಭಾಭವನ ನಿರ್ಮಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶೀಘ್ರವೇ ಕಾಮಗಾರಿ ಈಗಾಗಲೇ ದರ್ಬೆ ಬಳಿ ಜಾಗ ಪರಿಶೀಲಿಸಿದ್ದು, ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರವೇ ಕಾಮಗಾರಿ ಆರಂಭಗೊಂಡು ಅದು ಉಪಯೋಗಕ್ಕೆ ಬರುವಂತಾಗಲಿ ಎಂದು ಅವರು ಹೇಳಿದರು. ಸಮ್ಮಾನಿತರ ಪರವಾಗಿ ಅಭಿನಂದನ ಮಾತು ಗಳನ್ನಾಡಿದ ಜಿಲ್ಲಾ ಒಕ್ಕೂಟದ ಮಾಜಿ ನಿರ್ದೇಶಕ ಎಸ್. ಬಿ. ಜಯರಾಮ ರೈ ತನ್ನ ಭಾಷಣದಲ್ಲಿ ಬೇಡಿಕೆ ಕುರಿತಂತೆ ಪ್ರಸ್ತಾವಿಸಿದ್ದರು.
Related Articles
Advertisement